ತಾರತಮ್ಯ ನಿವಾರಣೆಗೆ ಮಾನಸಿಕ ಪರಿವರ್ತನೆ ಅಗತ್ಯ: ಪಂಚಾಕ್ಷರಯ್ಯ

0
15
loading...

ಬಂಕಾಪುರ : ಸಾಮಾಜಿಕ, ಆರ್ಥಿಕ, ಹಾಗೂ ಶೈಕ್ಷಣಿಕ ತಾರತಮ್ಯವನ್ನು ಪರಿಪೂರ್ಣ ನಿರ್ಮೂಲನೆ ಗೊಳಿಸಿದಾಗ ಮಾತ್ರ ರಾಷ್ಟ್ರವನ್ನು ಪರಿಪೂರ್ಣ ವಿಕಾಶ ಗೊಳಿಸಲು ಸಾಧ್ಯವಿದೆ. ದಲಿತರ, ಬಡವರ, ಮಹಿಳೆಯರ ಮೇಲೆ ಶೋಷಣೆ ದೌರ್ಜನ್ಯಗಳ ನಿಯಂತ್ರಣಕ್ಕೆ ಕಾನೂನನ್ನೂ ಮೀರಿ ಮಾನಸಿಕ ಪರಿವರ್ತನೆಯಿಂದ ಮಾತ್ರ ಸಾದ್ಯವಿದೆ ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಚ್.ಬಿ.ಪಂಚಾಕ್ಷರಯ್ಯ ಹೇಳಿದರು.

ಅವರು ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕಾ ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಪುರಸಭೆ, ದಲಿತ ಒಕ್ಕೂಟ, ಆಶಾಕಿರಣ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ನಡೆದ ನಾಗರಿಕರ ಹಕ್ಕು ಸಂರಕ್ಷಣೆ, ಪರಿಶಿಷ್ಟಜಾತಿ ಅಧಿನಿಯಮದಡಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ದೇಸಿಸಿ ಮಾತನಾಡಿದ ಅವರು ಸಾರ್ವತ್ರಿಕ ನೈತಿಕತೆ ಹಾಗು ಮಾನವನ ಸಹಜ ಪ್ರೀತಿ ಭಾವನೆಗಳು ಸೃಷ್ಠಿಯಾಗಬೇಕು. ವರ್ಣಬೇದ ನೀತಿ ಪೋಷಣೆ ಮತ್ತು ರಕ್ಷಣೆ ಆಧುನಿಕ ನಾಗರಿಕ ಸಮಾಜದ ಮಕೃರ್ತಿ ಮತ್ತು ದೇವರ ವಿರುದ್ದದ ದೊಡ್ಡ ದುರಂತ. ಇಂದು ವಿಕಾಶದಕಡೆ ಸಾಗುತ್ತಿದ್ದೆವೆ ಆದರೆ ದಲಿತರ ಹಾಗು ಮಹಿಳೆಯರ ಮೇಲಿನ ದೌರ್ಜನ್ಯಗಳು ಜಗತ್ತಿನ ಮುಂದೆ ನಮ್ಮನ್ನು ಕುಬ್ಜರನ್ನಾಗಿಸಿವೆ. ವರ್ಣಬೇದ ನೀತಿ ಸಂಪೂರ್ಣ ನಿವಾರಣೆಗೆ ಮಾನವೀಯ ಮೌಲ್ಯಗಳ ಉನ್ನತಿಕರಣ ಪರಸ್ಪರ ಭಾವನೆಗಳ ಅನುಷ್ಠಾನದಿಂದ ಅದು ಸಾದ್ಯವಿದೆ ಎಂದು ಹೇಳಿದರು.
ಸಾಮಾಜಿಕ ನ್ಯಾಯ ಸಮೀತಿ ತಾಲೂಕಾ ಅದ್ಯಕ್ಷ ಮಲ್ಲೇಶಪ್ಪ ದೊಡ್ಡಮನಿ ಮಾತನಾಢಿ ಹಿಂದಿನ ಕಾಲದಿಂದ ಇಂದಿವವರೆಗೂ ಪರಿಶಿಷ್ಠ ಜಾತಿ ಪಂಗಡಗಳ ಜನಾಂಗ ಮೇಲ್ವರ್ಗದ ಜನಾಂಗದವರಿಂದ ತುಳಿತಕ್ಕೆ ಒಳಗಾಗುತ್ತಲೆ ಬಂದಿದ್ದಾರೆ. ಅದನ್ನು ತಡೆಯಬೇಕಾದರೆ ಡಾ.ಬಿ.ಆರ್.ಅಂಬೇಡ್ಕರ ರಚಿಸಿದ ನಾಗರಿಕರ ಹಕ್ಕು ಸಂರಕ್ಷಣಾ ಅದಿನಿಯಮ ಕಾನೂನನ್ನು ತಿಳಿದುಕೊಳ್ಳುವದು ಅವಸ್ಯವಾಗಿದೆ ಎಂದು ಹೇಳಿದರು.

ಮಲ್ಲೇಶಪ್ಪ ಹರಿಜನ ಮಾತನಾಡಿದರು. ಪುರಸಭೆ ಅದ್ಯಕ್ಷೆ ಶಾಬಿರಾಬಿ ಯಲಗಚ್ಚ, ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಪಿಎಸ್‍ಐ ಅನ್ನಪೂರ್ಣ ಹುಲಗೂರ, ಎನ್.ವಿ.ಪದ್ಮ, ಸುನಿತಾ ಬೆಟಗೇರಿ, ಕುತೆಜಾಬಿ ಬಮ್ಮನಹಳ್ಳಿ, ಮಂಜುನಾಥ ಹೊಸಮನಿ. ಡಿ.ಎಸ್.ಮಾಳಗಿ, ಎಂ.ಎಸ್.ಹಳವಳ್ಳಿ, ಮಹದೇವಪ್ಪ ವಡ್ಡರ, ಬಸವರಾಜ ಕಟ್ಟಿಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಹನಮಂತಪ್ಪ ಚಿಕ್ಕೇರಿ ನಿರೂಪಿಸಿದರು.

loading...