ತಾಲೂಕಿನಾದ್ಯಂತ ಹೋಳಿ ಹಬ್ಬ ಆಚರಣೆ

0
17
loading...

ಕುಮಟಾ: ತಾಲೂಕಿನಾದ್ಯಂತ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದ್ದು, ಕಲರ್ ಪುಲ್ ಹೋಳಿಯ ಸಂಭ್ರಮಾಚರಣೆಯಲ್ಲಿ ಯುವಕರು, ಯುವತಿಯರು, ಮಹಿಳೆಯರು, ಪುಟಾಣಿ ಮಕ್ಕಳು ಸೇರಿದಂತೆ ಮುದುಕರು ಸಹ ಬಣ್ಣದ ಹೋಕಳಿಯಲ್ಲಿ ಕುಣಿದು ಕುಪ್ಪಳಿಸಿ ಮಿಂದೆದ್ದರು.
ಬೆಳಿಗ್ಗೆಯಿಂದಲೇ ಯುವಕರ ತಂಡ ಪ್ರಮುಖ ರಸ್ತೆಗಳಲ್ಲಿ ಬಣ್ಣ ಹಿಡಿದು ಸಂಚಾರಿಗರಿಂದ ಹಬ್ಬಗಾಣಿಕೆ ಪಡೆದು, ಹ್ಯಾಪಿ ಹೋಳಿಯ ಶುಭಾಷಯ ವಿನಿಮಯ ಮಾಡಿಕೊಂಡರು. ಅಲ್ಲದೇ ಮನೆ ಮನೆಗಳಿಗೆ ತೆರಳುವ ವಿವಿಧ ವೇಷಧಾರಿಗಳು ಹಾಗೂ ಯುವಕರು ದುಮ್ಸೋಲೆ ಎಂದು ನಗೆಚಟಾಕಿ ಸಿಡಿಸುತ್ತ ಹಬ್ಬಗಾಣಿಕೆ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಚಿಕ್ಕ ಮಕ್ಕಳು ಕೂಡ ಕೈ ತುಂಬ ಬಣ್ಣದ ಪ್ಯಾಕೆಟ್‍ಗಳನ್ನು ಹಿಡಿದುಕೊಂಡು ಕಂಡಕಂಡವರ ಮೇಲೆ ಬಣ್ಣವೆರಚಿ ಸಂಭ್ರಮಿಸಿದರು.
ಪಟ್ಟಣದ ನೆಲ್ಲಿಕೇರಿ ಹಳೆ ಬಸ್‍ನಿಲ್ದಾನದ ಆವರಣದಲ್ಲಿ ರೋಟ್ರ್ಯಾಕ್ಟ್ ಕ್ಲಬ್ ಹಾಗೂ ರವಿರಾಜ್ ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ಹೋಳಿ ಹಬ್ಬವನ್ನು “ರಂಗ್ ದೇ” ಕಾರ್ಯಕ್ರಮದ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ಬೃಹತ್ ಟ್ಯಾಂಕ್‍ಗಳಲ್ಲಿ ಬಣ್ಣದ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದು, ಬಣ್ಣ ಎರೆಚಾಡಲು ಬಣ್ಣ ಪ್ರಿಯರಿಗೆ ಅನುಕೂಲವಾಗುವ ಜೊತೆಗೆ ಬಣ್ಣದ ಮಳೆಯ ವ್ಯವಸ್ಥೆಯು ಕೂಡ ಮಾಡಲಾಗಿತ್ತು. ಬನ್ನದ ಮಳೆಯಲ್ಲಿ ನೆನೆದ ಯುವಕರು ಕಣಿದು ಕುಪ್ಪಳಿಸಿದರು. ಅಲ್ಲದೇ ಮೊಸರು ಕುಡಿಕೆಯನ್ನು ಒಡೆಯುವ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.

loading...