ದಾಂಡೇಲಿ ನಗರಸಭೆಯಲ್ಲಿ ಬಜೆಟ್‌ ಮಂಡನಾ ಸಭೆ

0
24
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರ ಸಭೆಯ ಅಧ್ಯಕ್ಷ ಎನ್‌.ಜಿ.ಸಾಳುಂಕೆಯವರ ಅಧ್ಯಕ್ಷತೆಯಲ್ಲಿ ಬುಧವಾರ ನಗರ ಸಭೆಯ ಸಭಾ ಭವನದಲ್ಲಿ 2018-19 ನೇ ಸಾಲಿನ ಬಜೆಟ್‌ ಮಂಡನಾ ಸಭೆಯು ಜರುಗಿತು. ಆಯ ವ್ಯಯ ಪತ್ರಿಕೆಯಲ್ಲಿ ರೂ.97 ಲಕ್ಷ 57 ಸಾವಿರ 904 ಉಳಿತಾಯ ತೋರಿಸಲಾಗಿದೆ.
ನೂತನವಾಗಿ ಆಯ್ಕೆಯಾದ ಸ್ಥಾಯಿ ಸಮಿತಿಯ ಅಧ್ಯಕ್ಷೆ ಫಾತಿಮಾ ಬೇಪರಿಯವರು ಸಭೆಯಲ್ಲಿ ಬಜೆಟ್‌ ಮಂಡಿಸಿದರು. ಬಜೆಟ್‌ನಲ್ಲಿ 42 ಕೋಟಿ 54 ಲಕ್ಷ 41 ಸಾವಿರ ಆದಾಯ ತೋರಿಸಲಾಗಿದ್ದು, ರೂ.39 ಕೋಟಿ 66 ಲಕ್ಷ 14 ಸಾವಿರ 703 ವೆಚ್ಚವನ್ನು ತೋರಿಸಲಾಗಿದೆ. ಬಜೆಟ್‌ನ ಪ್ರಮುಖ ವೆಚ್ಚಗಳು, ಹೊಸ ರಸ್ತೆ ನಿರ್ಮಾಣಕ್ಕಾಗಿ ರೂ, 8 ಕೋಟಿ, ರಸ್ತೆ ರೀಪೆರಿ ಹಾಗೂ ನಿರ್ವಹಣೆಗಾಗಿ ರೂ.2 ಕೋಟಿ, ಹೊಸ ಗಟಾರ ನಿರ್ಮಾಣಕ್ಕಾಗಿ ರೂ. 8 ಕೋಟಿ, ವಾಹನ ಖರೀದಿಗಾಗಿ ರೂ.60 ಲಕ್ಷ, ಶವ ಸಂಸ್ಕಾರ ನಿರ್ವಹಣೆ ಹಾಗೂ ದುರಸ್ತಿಗಾಗಿ ರೂ. 5 ಲಕ್ಷ, ನೀರು ಸರಬರಾಜು ದುರಸ್ತಿ ಮತ್ತು ನಿರ್ವಹಣೆ ರೂ. 5 ಲಕ್ಷ, ಉದ್ಯಾನಗಳ ರೀಪೆರಿ ಮತ್ತು ನಿರ್ವಹಣೆ ರೂ. 5 ಲಕ್ಷ ಎಂದು ತೋರಿಸಲಾಗಿದೆ.
ಸಭೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿಲ್ಲ ಸಿಬ್ಬಂದಿಗಳ ಕೊರತೆ ನಿವಾರಿಸಲು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಹಾಗೂ ಜಿಲ್ಲಾಧಿಕಾರಿಗಳ ಮೇಲೆ ಹೆಚ್ಚಿನ ಒತ್ತಡ ತರಬೇಕೆಂದ ಸದಸ್ಯರಾದ ನಂದೀಶ ಮುಂಗರವಾಡಿ, ಡಿ.ಸ್ಯಾಮಸನ್‌, ಕೀರ್ತಿ ಗಾಂವಕರ್‌, ರವಿ ಸುತಾರ, ಮಂಜು ರಾಠೋಡ್‌, ಮುಸ್ತಾಕ್‌ ಶೇಖ ಸಭೆಯ ಅಧ್ಯಕ್ಷ ಹಾಗೂ ಆಯುಕ್ತರಿಗೆ ಸೂಚಿಸಿದರು. ದಾಂಡೇಲಿ ನಗರ ತಾಲೂಕಾಗಿದೆ ಬೆಳವಣಿಗೆಯನ್ನು ಕಾಣುತ್ತಿದೆ ಆದ್ದರಿಂದ ನಗರದಲ್ಲಿ ಜಿ+3, ಜಿ+4 ಮನೆಗಳ ನಿರ್ಮಾಣಕ್ಕೆ ಸರ್ಕಾರದ ಅನುಮತಿಯನ್ನು ಪಡೆಯಲು ಕೂಡಲೇ ಕ್ರಮಕೈಕೊಳ್ಳಬೇಕೆಂದು ಸದಸ್ಯ ಅಶ್ಪಾಕ್‌ ಶೇಖ ಆಯುಕ್ತರಲ್ಲಿ ವಿನಂತಿಸಿದರು. ನಗರಸಭೆಯ ಉಪಾಧ್ಯಕ್ಷ ಮಹ್ಮಮದ್‌ ಫನಿಬಂದ್‌ , ಆಯುಕ್ತರಾದ ಆರ್‌.ವಿ. ಜತ್ತಣ್ಣ, ಇತರ ನಗರಸಭಾ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

loading...