ದಿವ್ಯಾ ಹಾಗರಗಿ ಮೇಲೆ ಕೇಸ್ ದಾಖಲು

0
24
loading...

ಕನ್ನಡಮ್ಮ ಸುದ್ದಿ-ವಿಜಯಪುರ: ಕಳೆದ ದಿ.25ರಂದು ವಿಜಯಪುರದಲ್ಲಿ ನಡೆದ ಸಮಾವೇಶದಲ್ಲಿ ಕಲಬುರ್ಗಿಯ ದಿವ್ಯಾ ಹಾಗರಗಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಶ್ರೀನಾಥ ಪೂಜಾರಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾ ಜಂಗಮ ಕ್ಷೇಮಾಭಿವೃದ್ಧಿ ನೇತೃತ್ವದಲ್ಲಿ ನಡೆದ ವೀರಶೈವ ಲಿಂಗಾಯತ ಸಮಾವೇಶದಲ್ಲಿ ದಿವ್ಯಾ ಹಾಗರಗಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಶರಣ ನಾಡಿನಲ್ಲಿ ಆಶಾಂತಿ ವಾತವರಣ ಸೃಷ್ಠಿ ಮಾಡಿದ್ದಾರೆ. ಇವರ ಮೇಲೆ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಅವರ ಪ್ರಚೋದನಕಾರಿ ಮಾತುಗಳನ್ನಾಧರಿಸಿ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು, ಆದರೆ ಹಾಗೆ ಆಗಿಲ್ಲ. ಈ ಕಾರಣಕ್ಕಾಗಿ ನಾವೇ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ, ಇನ್ನಾದರೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಚಿವ ಎಂ.ಬಿ ಪಾಟೀಲರ ಬಗ್ಗೆ ದಿವ್ಯಾ ಅವರು ಏಕವಚನದಲ್ಲಿ ಮಾತನಾಡಿ, ಅವರನ್ನು ರಸ್ತೆ ಬಂದ್ರೆ ಪೀಸ್ ಪೀಸ್ ಮಾಡಿ ಹಾಕುತ್ತೇವೆಂದು ಅಸಂಸದೀಯ ಪದ ಬಳಕೆ ಮಾಡಿದ್ದಾರೆ. ಪುಣ್ಯಕ್ಷೇತ್ರವಾದ ವಿಜಯಪುರದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇಂತಹ ವ್ಯಕ್ತಿಗಳಿಗೆ ಶ್ರೀಗಳು ವೇದಿಕೆ ನೀಡಿವುದು ಸರಿಯಲ್ಲ, ಮಾನವ ಧರ್ಮಕ್ಕೆ ಜಯವಾಗಲೆಂದು ಹೇಳುವ ಬಾಯಲ್ಲಿ ಕೊಲೆ ಮಾಡುವು ಮಾತುಗಳು ಹೇಳುತ್ತಿರುವುದು ಖಂಡನೀಯ ಎಂದರು.

loading...