ದೇವರ ಸೃಷ್ಠಿಯಲ್ಲಿ ಯಾವುದು ಕೆಟ್ಟದಲ್ಲ: ಗುರುಲಿಂಗ

0
22
loading...

ಕನ್ನಡಮ್ಮ ಸುದ್ದಿ- ಧಾರವಾಡ: ಜೀವಾತ್ಮ ಇಲ್ಲದ ಸೃಷ್ಠಿ ಯಾವುದು ಇಲ್ಲ ಎಂಬ ಭಗದ್ಗೀತೆಯ ಮಾತನ್ನು ನೆನಪಿಸಿಕೊಂಡ ಅವರು ದೇವರ ಸೃಷ್ಠಿಯಲ್ಲಿ ಯಾವುದು ಕೆಟ್ಟದಲ್ಲ ಎಂದು ಸಾಹಿತಿ ಡಾ ಗುರುಲಿಂಗ ಕಾಪಸೆ ಹೇಳಿದರು. ಅರಣ್ಯ ಅಧಿಕಾರಿ ಎಂ. ವ್ಹಿ. ಒಡ್ಡೀನ ಅವರ ಅರಣ್ಯ ಬದುಕಿನ ಬಗ್ಗೆ ಬರೆದ ಅನುಭವ ಕಥನ ‘ನಾ ಕಂಡ ಹತ್ತು ಹಲವು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಹಸಿರು ಹೊನ್ನು ಪ್ರಕಾಶನ ಸಂಸ್ಥೆ ಇದನ್ನು ಹೊರತಂದಿದ್ದು ವನ್ಯ ಜೀವಿಗಳೇ ನಿಜಕ್ಕೂ ಸಂಘ ಜೀವಿಗಳು, ಉತ್ತರ ಕರ್ನಾಟಕದ ಭಾಗದ ಲೇಖಕ ಒಡ್ಡೀನ ಅವರು ಇಂತಹ ಅನುಭವದ ಪುಸ್ತಕವನ್ನು ಹೊರತಂದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿ ಅವರಲ್ಲಿ ಅರಣ್ಯದ ಬಗ್ಗೆ ಇದ್ದ ಕುತೂಹಲ ಆಸಕ್ತಿ ಇವೆಲ್ಲವುಗಳಿಂದಲೇ ಇಂತಹ ಅಮೂಲ್ಯ ಪುಸ್ತಕ ಹೊರಬಂದಿದೆ ಎಂದರು. ಅರಣ್ಯ ಅಧಿಕಾರಿ ಎಂ.ಎಚ್‌.ಎ. ಶೇಖ ಮಾತನಾಡಿ, ಅರಣ್ಯದ ಬಗ್ಗೆ ಮತ್ತು ಅರಣ್ಯ ಜೀವಿಗಳ ಬಗ್ಗೆ ಮುಕ್ತಮನದ ಚಿಂತನೆ ಅವಶ್ಯವಾಗಿದೆ ಎಂದರು. ವನ್ಯ ಜೀವಿಗಳು ಮುಗ್ಧ ಪ್ರಾಣಿಗಳು.
ಅವು ಹಿಂಸ್ರ ಪಶುಗಳಲ್ಲ ಈ ಬಗ್ಗೆ ತಪ್ಪು ಕಲ್ಪನೆ ಹೋಗಬೇಕು. ಇತ್ತೀಚೆಗೆ ಅರಣ್ಯ ನಾಶವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಶೇಖ ಅವರು ಈ ಬಗ್ಗೆ ಜನತೆಯಲ್ಲಿ ಸತತ ಜಾಗೃತಿ ಅವಶ್ಯ ಎಂದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆವಹಿಸಿ ಮಾತನಾಡಿ, ನಿಸರ್ಗ ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸುತ್ತದೆ. ಪ್ರಾಣಿಗಳು ಮನುಷ್ಯನಷ್ಟು ಅಪಾಯಕಾರಿ ಅಲ್ಲ ಅರಣ್ಯ ಕಳೆಯುತ್ತಿರುವ ಬಗ್ಗೆ ಈಗ ಸಂಕಷ್ಟವನ್ನು ಮನುಷ್ಯ ಕುಲ ಅನುಭವಿಸುತ್ತಿದೆ ಎಂದರು. ಪುಸ್ತಕ ಪರಿಚಯವನ್ನು ಮಾಡಿದ ಪತ್ರಕರ್ತ ಮನೋಜ ಪಾಟೀಲ ಮಾತನಾಡಿ, ಸಾಕಷ್ಟು ಕುತೂಹಲ ಘಟನೆಗಳಿಂದ ‘ನಾ ಕಂಡ ಹತ್ತು ಹಲವು’ ಪುಸ್ತಕ ಅಪರೂಪವಾಗಿದ್ದು ಲೇಖಕ ಒಡ್ಡೀನ ಅವರಿಂದ ಇನ್ನಿಷ್ಟು ಅರಣ್ಯ ಬದುಕಿನ ಬಗ್ಗೆ ಹೊಸ ಪುಸ್ತಕಗಳು ಬರಲಿ ಎಂದರು. ಎಂ. ಎಸ್‌. ಗಾಣಿಗೇರ, ಬಿ. ಎನ್‌. ಪಾಟೀಲ, ಶಿವಣ್ಣ ಬೆಲ್ಲದ, ಶಂಕರ ಕುಂಬಿ, ಆನಂದ ಒಡ್ಡೀನ ಉಪಸ್ಥಿತರಿದ್ದರು. ವೀರಣ್ಣ ಒಡ್ಡೀನ ನಿರೂಪಿಸಿ, ವಂದಿಸಿದರು.

loading...