ದೇವಸ್ಥಾನ ಧ್ವಂಸಕ್ಕೆ ರಾಜಕಾರಣಿಯ ಕುಮ್ಮಕ್ಕು: ತಿಪ್ಪೇರುದ್ರಸ್ವಾಮಿ ಆರೋಪ

0
14
loading...

ಗಂಗಾವತಿ: ಹಲವು ವರ್ಷಗಳ ಹಿಂದೆ ನಿರ್ಮಾಣ ಹಂತದಲ್ಲಿದ್ದ ಅಯ್ಯಪ್ಪಸ್ವಾಮಿ ದೇವಸ್ಥಾನವನ್ನು ರಾಜಕಾರಣಿಯೊಬ್ಬರ ಕುಮ್ಮಕ್ಕಿನಿಂದಾಗಿ ತಾಲೂಕು ಆಡಳಿತ ಧ್ವಂಸಗೊಳಿಸಿತ್ತು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪೇರುದ್ರಸ್ವಾಮಿ ಆರೋಪಿಸಿದರು.

ಅಯ್ಯಪ್ಪಗಿರಿಯಲ್ಲಿ ಶುಕ್ರವಾರ 800 ಜನ ಹನುಮ ಮಾಲಾಧಾರಿಗಳು ಇರುಮುಡಿ ಸೇವೆಯನ್ನು ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇವಸ್ಥಾನ ಧ್ವಂಸಗೊಳಿಸಿರುವ ವ್ಯಕ್ತಿಗೆ ಮೇ, ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಉತ್ತರ ನೀಡುತ್ತಾನೆ ಎಂದು ಅವರು ತಿಳಿಸಿದರು.
ಹಿಂದೂ ಜನರ ಭಾವನೆಗಳಿಗೆ ಧಕ್ಕೆಯಾಗುವಂತಹ ಕೃತ್ಯ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಧಕ್ಕೆ ತರುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಇದು ನಿಲ್ಲಬೇಕು ಎಂದು ಹೇಳಿದರು. ಕಳೆದ ಡಿಸಂಬರ ತಿಂಗಳಿನಲ್ಲಿ ಸಹ ಹನುಮಮಾಲಾಧಾರಿಗಳಿಗೆ ಮೆರವಣಿಗೆ ಮಾಡಲು ಅವಕಾಶ ನೀಡಿರಲಿಲ್ಲ. ಇಂತಹ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ತಿಳಿಸಿದರು.

ಕೈ ಬಿಡದ ದೇವರು:ಅಯ್ಯಪ್ಪಸ್ವಾಮಿಗೆ ಎಲ್ಲ ವರ್ಗಗಳ ಜನರು ಭಕ್ತರಿದ್ದಾರೆ. ಇಲ್ಲಿ ಜಾತಿಬೇಧ ಇಲ್ಲ. ಅಯ್ಯಪ್ಪಸ್ವಾಮಿ ನಂಬಿದ ಭಕ್ತರ ಕೈ ಬಿಡುವದಿಲ್ಲ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಮುಖ್ಯಸ್ಥ ಜಟ್ಟಿ ವೀರಪ್ರಸಾದ, ಹುಲ್ಲತ್ತಿ ಬಸಣ್ಣ, ಪತ್ರಕರ್ತ ಶರಣಯ್ಯಸ್ವಾಮಿ ಕರಡಿಮಠ ಪಾಲ್ಗೊಂಡಿದ್ದರು.

loading...