ದೇಶಿಯ ಸಂಪ್ರದಾಯ ಯುವ ಜನಾಂಗ ಉಳಿಸಿಬೇಕು: ಬೇಟಗಾರ

0
18
loading...

ಕನ್ನಡಮ್ಮ ಸುದ್ದಿ-ಗೋಕಾಕ: ದೇಶಿಯ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಲಕ್ಷ್ಮೀ ಎಜ್ಯುಕೇಶನ್‌ ಟ್ರಸ್ಟಿನ ಆಡಳಿತಾಧಿಕಾರಿ ಎಸ್‌.ಜಿ ಬೆಟಗಾರ ಹೇಳಿದರು.
ಅವರು ಬುಧವಾರದಂದು ನಗರದ ಲಕ್ಷ್ಮಣರಾವ್‌ ಜಾರಕಿಹೊಳಿ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಸಂಪ್ರದಾಯ ಸಪ್ತಾಹದ ಸಮಾರೋಪದ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಆಧುನಿಕ ತಾಂತ್ರಿಕ ಯುಗದಲ್ಲಿ ನಾವು ಎಷ್ಟೇ ಮುಂದುವರೆದರು ಅನಾದಿಕಾಲದಿಂದ ನಡೆದುಕೊಂಡು ಬಂದಿರುವ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಐ.ಎಸ್‌ ಪವಾರ,ಉಪನ್ಯಾಸಕರಾದ ಡಿ.ಬಿ.ತಳವಾರ, ಎಂ.ಯು.ಕಂಬಾರ, ಎಂ.ವೈ.ಪಾಟೀಲ, ವಿ.ಎಂ.ಖಂಡುಗೋಳ ಸೇರಿದಂತೆ ಇತರರು ಇದ್ದರು.

loading...