ಧರ್ಮ ರಕ್ಷಿದರೇ, ಧರ್ಮ ನಮ್ಮನ್ನು ರಕ್ಷಿಸುತ್ತದೆ: ಶ್ರೀ ಬಸವರಾಜೇಂದ್ರ ಸ್ವಾಮೀಜಿ

0
24
loading...

ಪಾಲಬಾವಿ 28: ಧರ್ಮವನ್ನು ನಾವು ರಕ್ಷಿಸಿದರೇ ಧರ್ಮ ನಮ್ಮನ್ನು ರಕ್ಷಿಸುತ್ತದೆ, ಪವಿತ್ರವಾದ ಈ ಮನುಷ್ಯ ಜನ್ಮದಲ್ಲಿ ನಾವು ಸಾದಾ ಸತ್‌ಕಾರ್ಯದಲ್ಲಿ ತೊಡಗಿ ಮನುಷ್ಯ ಜನ್ಮವನ್ನು ಸಾರ್ಥ ಮಾಡಿಕೊಳ್ಳಬೆಕ್ಕೆಂದು ಅಚಲೇರಿ-ಜಿಡಗಾ ಮಠದ ಪೀಠಾಧಿಪತಿ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.ಗ್ರಾಮದಲ್ಲಿ ಜರುಗಿದ ಶ್ರೀ ಮಲ್ಲಿಕಾರ್ಜುನ ದೇವರ ಕಂಬಿ ಐದೇಸಿ ಮಹೋತ್ಸವದಲ್ಲಿ ಮಾಲ್ಗೊಂಡು ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಪಡಸಾವಳಿ ಗ್ರಾಮದಲ್ಲಿ 1912ರಲ್ಲಿ ಲಿಂ.ಶ್ರೀ ಬಸವಣ್ಣಯ್ಯ ಮುತ್ತಾರವರು ಶ್ರೀ ಶರಣಬಸವೇಶ್ವರ ಪುರಾಣವನ್ನು ಪ್ರಾರಂಭಿಸಿದ್ದರು ಅಂದು ಆರಂಭಗೊಂಡ ಪುರಾಣವು ನಿತ್ಯ ನಿರಂತರ ನಡೆದು ಬಂದು ಶತಮಾನೋತ್ಸವ ಕಾನುತ್ತಿರುವದು ನಮ್ಮೆಲ್ಲರ ಸೌಭಾಗ್ಯವಾಗಿದೆ. ದಿ.14ರಿಂದ ಶ್ರೀ ಶರಣಬಸವೇಶ್ವರ ಸಂಚಾರಿ ಪುರಾಣ, ಹಾಗೂ ಭಿಕ್ಷಾಯಾತ್ರೆಯನ್ನು ಆರಂಭಿಸಿದ್ದು, ಪಾಲಬಾವಿ ಗ್ರಾಮದಲ್ಲಿ ಶನಿವಾರ ದಿ.31, ಹಾಗೂ ರವಿವಾರ ಏ. 1ರಂದು ಭಿಕ್ಷಾಯಾತ್ರೆ ಆರಂಭಿಸಲಾಗುವದು ತಮ್ಮೆಲ್ಲರ ಸಹಕಾರ ಸೇವಾ ಕಾರ್ಯವು ಅವಶ್ಯವಾಗಿದ್ದು, ಏ.20ರಂದು ಪಡಸಾವಳಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಪುರಾಣದ ಶತಮಾನೋತ್ಸವ, ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಜರಗುವದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಸಂಜಯ ತೇಗೂರ, ಮಹಾದೇವ ಮರಡಿ, ರಾಮಪ್ಪ ಕಾಡಶೆಟ್ಟಿ, ಭೀಮಪ್ಪ ಮರಡಿ, ಪರಪ್ಪ ಗೋಡಿ, ಶಿವಪ್ಪ ಕಾಡಶೆಟ್ಟಿ, ಸಂಗಪ್ಪ ತುಪ್ಪದ, ಈರಪ್ಪ ಮೂಡಲಗಿ, ರಾಮಪ್ಪ ತೇಗೂರ, ಗಿರೇಪ್ಪ ಬಳಗಾರ, ಸಂಗಪ್ಪ ಸೈದಾಪೂರ, ಶಿವಬಸವ ಕಾಪಸಿ, ಕೃಷ್ಠರಾವ್‌ ನಾಯಿಕ, ಭರಮಪ್ಪ ನಿಂಗನೂರ, ಗಿರೀಶ ಕ್ಯಾಬಾನಿ, ಭರಮಪ್ಪ ಮಾನಶೆಟ್ಟಿ, ಪರಪ್ಪ ಜಾನಮಟ್ಟಿ, ಶ್ರೀಶೈಲ ಮರಡಿ, ಭರಮಪ್ಪ ಬಡಚಿ, ಪ್ರಕಾಶ ಮಾದರ, ಶ್ರೀಶೈಲ ಮಾನಶೆಟ್ಟಿ, ಕಲ್ಲಪ್ಪ ನಿಸ್ಪತ್‌ನಾಯಿಕ, ಭರಮಪ್ಪ ಕಂಬಾರ ಇದ್ದರು.

loading...