ನಗರಸಭೆ ನಿರ್ಲಕ್ಷ: ಶೌಚಾಲಯ ತಾವೇ ಸ್ವಚ್ಛಗೊಳಿಸಿದ ಸಾರ್ವಜನಿಕರು

0
12
loading...

ಕನ್ನಡಮ್ಮ ಸುದ್ದಿ-ಕಾರವಾರ: ನಗರಸಭೆ ಸಾಮಾನ್ಯ ಸಭೆಯಲ್ಲಿ ಬಹು ಚರ್ಚೆಗಳಗಾದ ಬೈತ್‌ಖೋಲ್‌ನ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಚಗೊಳಿಸುವಲ್ಲಿ ನಿರ್ಲಕ್ಷ್ಯ ತೋರಿದ ನಗರಸಭೆಯ ಧೋರಣೆಯಿಂದ ಬೇಸರಗೊಂಡ ಸ್ಥಳೀಯರೆಲ್ಲ ಸೇರಿ ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸಿ, ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಟ್ಟಿದ್ದಾರೆ.
ಬೈತ್‌ಖೋಲ್‌ ಬಂದರಿನಲ್ಲಿರುವ ಸಾರ್ವಜನಿಕ ಶೌಚಾಲಯ ಪಾಳುಬಿದ್ದು, ಸಾರ್ವಜನಿಕ ಬಳಕೆಗೆ ಅಸಾಧ್ಯವಾಗಿತ್ತು. ಅದನ್ನು ಸ್ವಚ್ಛಗೊಳಿಸಿ ಬಳಕೆಗೆ ಯೋಗ್ಯವಾಗುವಂತೆ ಅಗತ್ಯ ಕಾಮಗಾರಿ ಕೈಗೊಳ್ಳುವಂತೆ ಇತ್ತೀಚೆಗೆ ನಡೆದ ನಗರಸಭೆಯ ಸಾಮಾನ್ಯಸಭೆಯಲ್ಲಿ ಆ ವಾರ್ಡ್‌ನ ಸದಸ್ಯ ಪ್ರಶಾಂತ ಹರಿಕಂತ್ರ ಅವರು ನಗರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಆದರೆ ಅಧಿಕಾರಿಗಳು ಸಭೆಯಲ್ಲಿ ಈ ವಿಷಯ ನಂತರ ನೋಡಿದರಾಯಿತು ಎಂಬ ಧೋರಣೆ ತೋರಿ ನಿರ್ಲಕ್ಷ್ಯಿಸಿದ್ದಾರೆ. ಇದರಿಂದ ಬೇಸರಗೊಂಡ ಸ್ಥಳೀಯರು ತಾವೇ ಸ್ವಚ್ಛಗೊಳಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ. ಒಡೆದುಹೋದ ಶೌಚಾಲಯದ ಛೇಂಬರ್‌ನ್ನು ಕೂಡ ಸ್ಥಳೀಯರೇ ದುರಸ್ತಿ ಮಾಡಿಸಿ, ಬಳಕೆಗೆ ಯೋಗ್ಯವಾಗುವಂತೆ ಮಾಡಿದ್ದಾರೆ. ಸ್ಥಳೀಯರ ಈ ಕಾರ್ಯ ಸರ್ವರ ಮೆಚ್ಚುಗೆಗೆ ಕಾರಣವಾಗಿದೆ.

loading...