ನನ್ನ ಅಭಿವೃದ್ದಿ ಕಾರ್ಯವೇ ನನಗೆ ಶ್ರೀರಕ್ಷೆ : ಮಂಕಾಳ ವೈದ್ಯ

0
21
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಶಾಸಕನಾದ ಮೇಲೆ 2ಸಾವಿರ ಕೋಟಿಗೂ ಅಧಿಕ ಅನುದಾನ ತಂದು ಕ್ಷೇತ್ರದ ಅಭೀವೃದ್ದಿ ಮಾಡಿದ್ದೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಲಾಭ ಸೀಗುವಂತೆ ಮಾಡಿದ್ದೇನೆ. ದಿನದ 24 ಗಂಟೆಯಲ್ಲಿ 20 ಘಂಟೆ ಕ್ಷೇತ್ರದ ಅಭೀವೃದ್ದಿಗಾಗಿಯೇ ದುಡಿದ್ದಿದೇನೆ. ವಿರೋಧಿಗಳು ಎನೇ ಹೇಳಿದರೂ ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ ತೃಪ್ತಿ ನನಗಿದೆ ಎಂದು ಶಾಸಕ ಮಂಕಾಳ ವೈದ್ಯ ತಿಳಿಸಿದರು.
ಅವರು ಮಂಗಳವಾರ ತಾಲೂಕಾ ಪಂಚಾಯತ್‌ ಸಭಾಭವನದಲ್ಲಿ ಕರೇದ ತ್ರೈಮಾಸಿಕ ಕೆಡಿಪಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ನನ್ನ ಅಭಿವೃದ್ದಿ ಕೆಲಸಕ್ಕೆ ಅಧಿಕಾರಿಗಳು ತುಂಬಾ ಸಹಕಾರ ನೀಡಿದ್ದಾರೆ. ನಾನು ತಂದ ಅನುದಾನವನ್ನು ಸಮರ್ಪಕವಾಗಿ ಜನರಿಗೆ ಮುಟ್ಟಿಸುವ ಕೆಲಸ ಅಧಿಕಾರಿಗಳು ಮಾಡಿದ್ದಾರೆ. ಹಾಗಾಗಿ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರತಿಯೊಂದು ಇಲಾಖೆಯಿಂದಲೂ ಕೋಟಿ ಲೆಕ್ಕದಲ್ಲಿ ಅನುದಾನ ತಂದು ಕ್ಷೇತ್ರದ ಅಭಿವೃದ್ದಿ ಮಾಡಿರುವಾಗ ಕೋಟಿಗೆ ಎಷ್ಟು ಸೊನ್ನೆ ಎಂದು ತಿಳಿಯದ ವಿರೋಧಿಗಳು ಬರಿ 74 ಕೋಟಿ ಕೆಲಸವಾಗಿದೆ ಎಂದು ಬೊಗಳೆ ಬಿಟ್ಟರೆ ಕ್ಷೇತ್ರದ ಜನರು ಯಾರು ಪ್ರಜ್ಞಾಹೀನರಲ್ಲ. ನನ್ನ ಅಭೀವೃದ್ದಿ ಕಾರ್ಯದ ಬಗ್ಗೆ ಕ್ಷೇತ್ರದ ಜನರಿಗೆ ಮನವರಿಕೆ ಇದೆ ಎಂದು ತಿಳಿಸಿದರು. ಚುಣಾವಣಾ ಸಂದರ್ಭದಲ್ಲಿ ಕ್ಷೇತ್ರದ ಜನತೆ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್‌ ಅಧ್ಯಕ್ಷರಾದ ಜಯಶ್ರೀ ಮೊಗೇರ, ತಾಲೂಕಾ ಪಂಚಾಯತ್‌ ಅಧ್ಯಕ್ಷರಾದ ಈಶ್ವರ ನಾಯ್ಕ, ತಾ.ಪಂ ಉಪಾಧ್ಯಕ್ಷೆ ರಾಧಾ ವೈದ್ಯ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿಟಿ ನಾಯ್ಕ, ತಹಶೀಲ್ದಾರ ವಿಎಂ ಬಾಡಕರ್‌, ಜಿ.ಪಂ ಸದಸ್ಯರಾದ ಸಿಂಧೂ ಭಾಸ್ಕರ ನಾಯ್ಕ, ಅಲ್ಬರ್ಟ ಡಿಕೋಸ್ತಾ ಹಾಗು ಆಧಿಕಾರಿ ವೃಂದದವರು ಸಭೆಯಲ್ಲಿ ಉಪಸ್ಥಿತರಿದ್ದರು.

loading...