ನಾಳೆ 24×7 ಕುಡಿಯುವ ನೀರು ಸರಬರಾಜು ಯೋಜನೆ ಉದ್ಘಾಟನೆ

0
47

 

loading...

 

ನಾಳೆ 24×7  ಕುಡಿಯುವ ನೀರು ಸರಬರಾಜು ಯೋಜನೆ ಉದ್ಘಾಟನೆ 

 

ಕನ್ನಡಮ್ಮ ಸುದ್ದಿ

 

ಸಂಕೇಶ್ವರ 13 : ಸಂಕೇಶ್ವರ ಪುರಸಭೆ ವ್ಯಾಪ್ತಿಯಲ್ಲಿ 24×7 ಕುಡಿಯುವ ನೀರು ಸರಬರಾಜು ಯೋಜನೆ ,ಉದ್ಘಾಟನೆ ಹಾಗೂ ಒಳಚರಂಡಿ ಯೋಜನೆ ಮತ್ತು ನೂತನ ಪುರಸಭೆ ಆಡಳಿತ ಕಚೇರಿ ಕಟ್ಟಡದ ಶಂಕುಸ್ಥಾಪನೆ ನಾಳೆ ದಿನಾಂಕ 14/3/2018 ರಂದು ಮುಂಜಾನೆ ೧೧ ಗಂಟೆಗೆ ನಡೆಯಲಿದೆ ಎಂದು ಹಿರಾ ಶುಗರ ಕಾರ್ಖಾನೆ ಅಧ್ಯಕ್ಷರಾದ ಅಪಾಸಾಹೇಬ ಶಿರಕೋಳಿ ಹೇಳಿದರು .

 

ಹಿರಾ ಶುಗರ ಕಾರ್ಖಾನೆಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ನಾಳೆ ಮುಂಜಾನೆ ಪಟ್ಟಣದ ಎಲ್ಲ ಮುತ್ತೈದೆಯರು ಕುಂಭದೊಂದಿಗೆ ಶಂಕರಲಿಂಗ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿಂದ ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಪುರಸಭೆ ತಲುಪಲಾಗುವುದು ನಂತರ ಪುರಸಭೆ ಆವರಣದಲ್ಲಿ ನೀರು ಪೂರೈಕೆ ಯೋಜನೆ ಉದ್ಘಾಟನೆ ಆಡಳಿತ ಕಚೇರಿಯ ಶಂಕು ಸ್ಥಾಪನೆ ಗಣ್ಯರಿಂದ ಜರುಗಲಿದೆ .ನಂತರ ಶಾಸಕ ಉಮೇಶ ಕತ್ತಿ ಅವರ 58 ನೆ ಹುಟ್ಟು ಹಬ್ಬದ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು .

ಈ ಸಂಧರ್ಭದಲ್ಲಿ ಸಂಗಮ ಸಕ್ಕರೆ  ಕಾರ್ಖಾನೆ ಅಧ್ಯಕ್ಷರಾದ ರಾಜೇಂದ್ರ ಪಾಟೀಲ,ಮುಖಂಡರಾದ ಅಮರ ನಲವಡೆ,ಗಜಾನನ ಕೊಳ್ವಿ,ಶ್ರೀಕಾಂತ್ ಹತನೂರಿ ,ಅಭಿ ಕುರಣಕರ ಮುಂತಾದವರು ಇದ್ದರು ‌.

 

 

loading...