ನಿರುದ್ಯೋಗ ಸಮಸ್ಯೆ ನಿವಾರಣೆಯೆ ನಮ್ಮ ಗುರಿ: ಸಚಿವ ದೇಶಪಾಂಡೆ

0
21
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ತಂತ್ರಜ್ಞಾನ ಬೆಳೆಯುತ್ತಿದ್ದಂತೆಯೆ ನಿರುದ್ಯೋಗ ಸಮಸ್ಯೆ ಜಟಿಲವಾಗತೊಡಗಿದೆ. ದೇಶದ ಆರ್ಥಿಕ ಸದೃಢತೆಗೆ ನಿರುದ್ಯೋಗ ಸಮಸ್ಯೆಯ ಶಮನ ಅತ್ಯಗತ್ಯ. ಈ ನಿಟ್ಟಿನಲ್ಲಿ ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟಿ ಸಂಸ್ಥೆಯು ಸ್ವ ಉದ್ಯೋಗ ತರಬೇತಿಯನ್ನು ನೀಡುವುದರ ಮೂಲಕ 18 ಸಾವಿರಕ್ಕೂ ಮಿಕ್ಕಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಸೃಷ್ಟಿ ಇಲ್ಲವೆ ಸ್ವ ಉದ್ಯೋಗವನ್ನು ಕೈಗೊಳ್ಳಲು ವಿಫುಲ ಅವಕಾಶ ಮಾಡಿ ಅವರುಗಳನ್ನು ಆರ್ಥಿಕ ಸಶಕ್ತರನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ನಿರುದ್ಯೋಗ ಸಮಸ್ಯೆ ನಿವಾರಣೆಯೆ ನಮ್ಮ ಮೊದಲ ಗುರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವಿ.ಆರ್‌.ಡಿ.ಎಂ ಟ್ರಸ್ಟಿನ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ನುಡಿದರು.
ಚಾಲಕರಿಗೆ ವಿಫುಲವಾದ ಅವಕಾಶವಿದ್ದು, ಶಿಬಿರಾರ್ಥಿಗಳು ಇದರ ಲಾಭವನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಬೇಕೆಂದರು. ನಗರ ಸಭೆಯ ಅಧ್ಯಕ್ಷ ಎನ್‌.ಜಿ.ಸಾಳುಂಕೆಯವರು ಮಾತನಾಡಿ ನುಡಿದಂತೆ ನಡೆಯುವ ಮುತ್ಸದ್ದಿ ರಾಜಕಾರಣಿ ದೇಶಪಾಂಡೆಯವರು ನಮಗೆ ದೊರೆತಿರುವುದು ನಮ್ಮ ಭಾಗ್ಯ. ರುಡ್‌ಸೆಟ್‌ ಸಂಸ್ಥೆಯ ಮೂಲಕ ಈ ಭಾಗದ ಜನರ ಕಣ್ಣೀರನ್ನು ಒರೆಸುವ ಕಾರ್ಯವನ್ನು ಸಚಿವ ದೇಶಪಾಂಡೆಯವರು ಮಾಡಿದ್ದಾರೆಂದರು. ವೇದಿಕೆಯಲ್ಲಿ ಟಾಟಾ ಮೋಟಾರ್ಸಿನ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ವೇಲು.ವಿ, ಜಿಲ್ಲಾ ಪಂಚಾಯ್ತಿ ಸದಸ್ಯ ಕೃಷ್ಣಾ ಪಾಟೀಲ, ಅಂಬೇವಾಡಿ ಗ್ರಾಮ ಪಂಚಾಯ್ತಿ ಸದಸ್ಯ ನಾಗುಬಾಯಿ ಪಂಗಡೆ, ನಗರ ಸಬೆಯ ಉಪಾಧ್ಯಕ್ಷ ಮಹಮ್ಮದ ಗೌಸ್‌ ಫನಿಬಂದ್‌, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್‌ ಕಿತ್ತೂರು, ಅಷ್ಪಾಕ ಶೇಖ, ಬಸೀರ್‌ ಗಿರಿಯಾಲ, ಯುವ ಕಾಂಗ್ರೆಸ್‌ ಕ್ಷೇತ್ರಾಧ್ಯಕ್ಷ ರಾಜೇಶ ರುದ್ರಪಾಟಿ, ಮುಖಂಡರುಗಳಾದ ಆದಂ ದೇಸೂರು, ಪ್ರಕಾಶ.ಜಿ.ಈ ಮೊದಲಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ ಸೆಟಿಯ ನಿರ್ದೇಶಕ ನಿತ್ಯಾನಂದ.ಆರ್‌.ವೈದ್ಯ ಸ್ವಾಗತಿಸಿದರು. ವಿ.ಎಂ.ಜೋಶಿ ವಂದಿಸಿದರು. ಕೆಂಪಣ್ಣ ಶೇಗುಣಶಿ ಕಾರ್ಯಕ್ರಮ ನಿರೂಪಿಸಿದರು. ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ ಸೆಟಿ ಅಧಿಕಾರಿಗಳಾದ ವಿನಾಯಕ ಚೌವ್ಹಾಣ್‌, ಶ್ರೀನಿವಾಸ್‌.ಎಸ್‌.ಕೆ, ಅಶೋಕ ಸೂರ್ಯವಂಶಿ ಸಹಕರಿಸಿದರು.

loading...