ನೀರಾವರಿ ಯೋಜನೆ ಕಾಮಗಾರಿಗೆ ಶಿಲಾನ್ಯಾಸ

0
24
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಬೇಡ್ತಿ ಹಳ್ಳದಿಂದ ತಾಲೂಕಿನ 129 ಕರೆಗಳಿಗೆ ನೀರು ತುಂಬಿಸುವ 289 ಕೋಟಿ ವೆಚ್ಚದ ಬೇಡ್ತಿ ಬೃಹತ್‌ ನೀರಾವರಿ ಯೋಜನೆ ಕಾಮಗಾರಿಗೆ ಮಂಗಳವಾರ ಜಿ.ಪಂ ಸದಸ್ಯ ರವಿಗೌಡ ಪಾಟೀಲ ಬಾಚಣಕಿ ಜಲಾಶಯದಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಒಂದು ದಿನ ಮುಂಚಿತವಾಗಿ ಶಿಲಾನ್ಯಾಸ: ಮಾರ್ಚ 28 ರಂದು ಜಲಸಂಪನ್ಮೂಲ ಸಚಿವ ಎಮ್‌.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಸ್ಥಳಿಯ ಶಾಸಕ ಶಿವರಾಮ ಹೆಬ್ಬಾರ ಸಮ್ಮುಖದಲ್ಲಿ ಈ ಕಾಮಗಾರಿ ಶಿಲಾನ್ಯಾಸ ಸಮಾರಂಭವನ್ನು ಅದ್ದೂರಿಯಾಗಿ ನೆರವೇರಿಸುವ ಬಗ್ಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಚುನಾವಣಾ ಆಯೋಗ ಇನ್ನೇನು ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯೊಂದಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಎಲ್ಲ ಲಕ್ಷಣಗಳು ಕಂಡುಬಂದಿದ್ದರಿಂದ ನೀತಿ ಸಂಹಿತೆ ಜಾರಿಯಾಗುವ ಕೆಲವೇ ಕ್ಷಣಗಳ ಮುಂಚಿತವಾಗಿ ಬೆಳಗಿನ ಜಾವ ಸಚಿವ ಹಾಗೂ ಶಾಸಕರ ಅನುಪಸ್ಥಿತಿಯಲ್ಲಿಯೇ ಜಿ.ಪಂ ಸದಸ್ಯ ರವಿಗೌಡ ಪಾಟೀಲ ಸ್ಥಳಿಯ ಜನಪ್ರತಿನಿಧಿಗಳೊಂದಿಗೆ ಶಿಲಾನ್ಯಾಸ ನೆರವೇರಿಸಬೇಕಾಯಿತು. ಮುಂಡಗೋಡ ಪ.ಪಂ ಅಧ್ಯಕ್ಷ ರಪೀಕ್‌ ಇನಾಮದಾರ, ತಾ.ಪಂ ಸದಸ್ಯ ಜ್ನಾನದೇವ ಗುಡಿಯಾಳ, ಗ್ರಾ.ಪಂ ಅಧ್ಯಕ್ಷ ಬಸಯ್ಯ ನಡುವಿನಮನಿ, ರಾಮಣ್ಣ ಪಾಲೇಕರ, ಫಕ್ಕೀರಸ್ವಾಮಿ ಗುಲ್ಯಾನವರ, ಸಂತೋಷ ಸಣ್ಣಮನಿ, ರಾಬರ್ಟ ಲೋಬೊ, ಯಲ್ಲಪ್ಪ ಗೋಣೆನವರ, ದುರ್ಗಪ್ಪ ಬೋವಿ ಮುಂತಾದವರು ಉಪಸ್ಥಿತರಿದ್ದರು.

loading...