ಪರಸ್ಪರ ಆರೋಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಳುಗಿವೆ: ಕುಮಾರಸ್ವಾಮಿ

0
19
loading...

ಕನ್ನಡಮ್ಮ ಸುದ್ದಿ-ತೇರದಾಳ: ಎರಡು ರಾಷ್ಟ್ರೀಯ ಪಕ್ಷಗಳು ಪರಸ್ಪರ ಕಮೀಷನ್ ಆರೋಪ ಮಾಡುತ್ತ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಹೊರತು ಜನರ ಕಷ್ಟಗಳತ್ತ ನೋಡಲು ಅವರಿಗೆ ಸಮಯವಿಲ್ಲ. ಹೀಗಿರುವ ಇವರ ಕೈಗೆ ಮತ್ತೇ ಅಧಿಕಾರ ಸಿಕ್ಕರೆ ರಾಜ್ಯದ ಅಭಿವೃದ್ಧಿ ಕನಸಾಗಿ ಉಳಿಯುತ್ತದೆ. ಈ ಸಲ ಅವರಿಬ್ಬರನ್ನೂ ಬಿಟ್ಟು ಜೆಡಿಎಸ್‍ಗೆ ಅಧಿಕಾರ ಕೊಟ್ಟರೆ, ಅಧಿಕಾರಕ್ಕೆರಿದ 24ಗಂಟೆಗಳಲ್ಲಿ ಎಲ್ಲ ರೀತಿಯ ಸಾಲ ಮನ್ನಾ ಮಾಡುವುದಾಗಿ ಜೇಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ ವಿಕಾಸ ಪರ್ವ ಬ್ರಹತ್ ಸಮಾವೇಶದಲ್ಲಿ ಅವರು ಮಾತನಾಡುತ್ತ ರೈತರ ಹಾಗೂ ನೇಕಾರರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ಆಗುತ್ತಿಲ್ಲ ಏಕೆಂದರೆ ರೈತರಿಂದ ಅವರಿಗೆ ಲಾಭವಿಲ್ಲ ಅದರ ಬದಲು ಕಾರ್ಪೋರೆಟ್ ಸಂಸ್ಥೆಗಳ ಸಾಲ ಮನ್ನಾ ಮಾಡಿದರೆ ಅವರಿಂದ ಇವರಿಗೆ ಲಾಭವಿದೆ ಎಂದು ಲೇವಡಿ ಮಾಡಿದರು.
ದೂಷಿಸಿದ್ದು: ಮಾತೃ ಪೂರ್ಣ ಯೊಜನೆಗೆ ಮಧ್ಯಾಹ್ನ ಒಂದು ಊಟಕ್ಕಾಗಿ ಮನೆಯಿಂದ ಹೊಕಳಿಸುತ್ತಿಲ್ಲವಾದ್ದರಿಂದ ಅದು ಸಂಪೂರ್ಣ ನೆಲಕಚ್ಚಿದ ಯೋಜನೆ. ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳಿಗೆ ಬಡ್ಡಿ ಸಹಿತ ಸಾಲ ಕೊಡುತ್ತಿದ್ದಾರೆ. ಈಗ ಅವರ ಸಾಲ 4300 ಕೋಟಿ. ಸರ್ಕಾರದಿಂದ ಸಾಲ ಮನ್ನಾ ಆಗಿದೆ ಆದರೆ ಅದಿನ್ನು ಫಲಾನುಭವಿಗಳಿಗೆ ಸೇರಿಲ್ಲ. ಸಾಲ ಮನ್ನಾ ಮಾಡುವುದು ಮತ್ತೇ ಸಾಲ ಮಾಡಲು ಉತ್ತೇಜನ. ಜನರ ತೆರಿಗೆ ಹಣದಲ್ಲಿ 5-6 ಪುಟಗಳಷ್ಟು ಜಾಹೀರಾತನ್ನು ಪತ್ರಿಕೆಗಳಲ್ಲಿ ಸರ್ಕಾರದ ಸಾಧನೆಯನ್ನು ಪ್ರಕಟಿಸಿ ಬೊಕ್ಕಸ ಖಾಲಿ ಮಾಡಿದ್ದಾರೆ.

ಪೂಜ್ಯ ಮಹಾವೀರ ಪ್ರಭುಗಳು ಸಾನಿಧ್ಯ ವಹಿಸಿದ್ದರು. ಶರಣು ಹುರಕಡ್ಲಿ, ಭುವನೇಶ್ವರಿ ಹಾದಿಮನಿ, ಸಲೀಂ ಮೋಮಿನ್, ಸಿದ್ದು ಮೂಶಪ್ಪಗೋಳ, ರೇಖಾ ಗಾಡಿವಡ್ಡರ, ಶಂಕರ ನಾಯಕ, ರವಿ ಹುಣಶ್ಯಾಳ, ಬಸವರಾಜ ಕಲಬುರ್ಗಿ, ಪ್ರಭು ಹೂಗಾರ, ಸಂಜು ಅಂಗಡಿ, ಬಸಪ್ಪ ಝಳಕೆ, ಮಲ್ಲು ಹೂಗಾರ, ಬಸವರಾಜ ಪಾದಯಾತ್ರೆ, ಸೈಯದ ಅಲ್ತಾಪ್, ಸುರೇಶ ಹತ್ತಿ, ಬಸವರಾಜ ಪುಟಾಣಿ, ನಾಗರಾಜ ಗಿಡವೀರ, ಶ್ಯಾನೂರ ರಾಮದುರ್ಗ, ಅಬುಬಕ್ಕರ್ ಗುಡಬಾಳೆ, ಮಹಾದೇವ ಕೋಳಿಗುಡ್ಡ, ನಾಗೇಶ ಗುರವ, ಪ್ರಕಾಶ ಬೆಟಕೇರಿ, ಶೇಖರ ಸಲಬನ್ನವರ, ಯಲ್ಲಪ್ಪ ಮುಶಿ, ಎಸ್.ಎಂ. ಮಂಟೂರ, ಸಚಿನ್ ಹುಕ್ಕೇರಿ ಸೇರಿದಂತೆ ಅನೇಕ ಮುಖಂಡರು,

loading...