ಪಿಎಸ್‌ಐ ವರ್ಗಾವಣೆಯನ್ನು ರದ್ದುಗೊಳಿಸುವಂತೆ ಆಗ್ರಹ

0
21
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಪ್ರವೀಣ ಕುಮಾರ್‌ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ ದಾಂಡೇಲಿಯಲ್ಲಿಯೇ ಮುಂದುವರೆಸುವಂತೆ ಮಾಡಬೇಕೆಂದು ಕಾಂಗ್ರೆಸ್‌ ಮುಖಂಡ ದಾದಾಪೀರ್‌ ನದಿಮುಲ್ಲಾ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಪಿಎಸ್‌ಐ ಪ್ರವೀಣಕುಮಾರ ದಾಂಡೇಲಿಗೆ ಬಂದು ಕೇವಲ ಆರು ತಿಂಗಳಷ್ಠೇ ಆಗಿತ್ತು. ನಗರದಲ್ಲಿ ಮಟ್ಕಾ, ಇಸ್ಪೀಟ್‌, ಅಂದರ ಬಾಹರ ಸೇರಿದಂತೆ ಅಕ್ರಮ ಚಟುವಟಿಕೆಗಳಿಗೆ ಒಂದು ನಿಯಂತ್ರಣ ಬಿದ್ದಿತ್ತು. ಆದರೆ ಇದೀಗ ಅವರನ್ನು ವರ್ಗಾವಣೆಗೊಳೊಸಲಾಗಿದೆ. ಇದು ಸರಿಯಲ್ಲ. ತಕ್ಷಣ ಅವರ ವರ್ಗಾವಣೆ ಅದೇಶ ರದ್ದುಗೊಳಿಸಿ, ಜೊತೆಗೆ ನಗರ ಠಾಣೆಯ ಹವಾಲ್ದಾರ್‌ ಪೋಲಿಸ್‌ ಸೋಮಶೇಖರ ಮೇತ್ರಿಯವರನ್ನು ಅಮಾನತ್ತು ಗೊಳಿಸುರುವುದೂ ಕೂಡಾ ಸರಿಯಲ್ಲ. ತಕ್ಷಣ ಅವರ ಅಮಾನತ್ತು ಹಿಂಪಡೆಯಬೇಕು. ಅವರು ಮತ್ತೆ ದಾಂಡೇಲಿಯಲ್ಲಿಯೇ ಮುಂದುವರೆಸಬೇಕೆಂದರು.
ಅಕ್ರಮ ಚಟುವಟಿಕೆಗಳು ಹತೋಟಿಗೆ ಬಂದಿತ್ತು. ನಮ್ಮ ನಗರದಲ್ಲಿ ಅವರೇ ಮುಂದುವರೆಯಬೇಕೆಂದರು. ದಲಿತ ಸಂಘರ್ಷ ಸಮಿತಿಯ ಪ್ರಮುಖ, ಆದಿ ಜಾಂಬವಂತ ಸಂಘಟನೆಯ ಆದ್ಯಕ್ಷ ಚಂದ್ರಕಾಂತ ನಡಿಗೇರ ಮಾತನಾಡಿದರು. ಸುದ್ದಿಗೋಷ್ಟಿಯಲ್ಲಿ ಕರವೇ ಅಧ್ಯಕ್ಷ ಪ್ರವೀಣ ಕೊಠಾರಿ, ಪ್ರಮುಖರಾದ ಅಬ್ಬಾಸ್‌ ಉಡಪಿ, ಸದ್ದಾಂ ಬಳೆಕುಂದ್ರಿ, ಇಮ್ತಿಯಾಜ ಸಯ್ಯದ್‌, ಮಹಮ್ಮದ್‌ ಸನದಿ, ಮಂಜೂರ ಅಲಿ, ಮಂಜುನಾಥ ಯರಗೇರಿ, ಪೈರೋಜ ಪೋಲಿಸ, ಷಾ ನವಾಜ ಕಾಕರ ಮುಂತಾದವರಿದ್ದರು.

loading...