ಪುರಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಆದ್ಯತೆ : ಶಾರದಮ್ಮ

0
20
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಮೊದಲು ಆದ್ಯತೆಗಳು ಬೆರಳಣಿಕೆಷ್ಟು ಮಾತ್ರ ಇದ್ದವು, ಆದರೆ ಮಹಿಳೆಯರು ಪುರುಷರಷ್ಟು ಸಮಾನವಾಗಿ ಶ್ರಮವಹಿಸಿ ಕೆಲಸ ಮಾಡುತ್ತಿರುವ ಸಹನಶೀಲ ತ್ಯಾಗಮಯಿ ಎಂದು ಮಾಜಿ ಶಾಸಕಿ ಶಾರದಮ್ಮ ಪಟ್ಟಣ ಹೇಳಿದರು
ಸ್ಥಳೀಯ ಎಂ.ಎಲ್‌.ಬಿ.ಸಿ ಆವರಣದಲ್ಲಿ ದ್ವೀತಿಯ ಮಹಿಳಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಮನಸ್ಸು ಮಾಡಿದರೆ ಪ್ರತಿಯೊಂದು ಕ್ಷೇತ್ರದಲ್ಲಿ ಮಿಂಚುತ್ತಿದ್ದಾಳೆ. ನಾವು ಶಾಸಕಿಯರಾದ ವೇಳೆಯಲ್ಲಿ ಇಷ್ಟೊಂದು ಅನುದಾನ ಸೌಲಭ್ಯಗಳಿರಲ್ಲಿ ಆದರು ಕೈಲಾದÀಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಅವರನ್ನು ಮಖ್ಯವಾನಿಗೆ ತರಬೇಕು. ನಮ್ಮ ಆಸೆಯಂತೆ ನನ್ನ ಮಗ ಅಶೋಕ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿ ಜನ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಬೆಳಗಾವಿ ರಾಣಿಚನ್ನಮ್ಮ ಸಂಘದ ಅಧ್ಯಕ್ಷೆ ಆರತಿ ಸೊಬರದ ಅವರು ಮಾತನಾಡಿ, ಸರ್ಕಾರ ಮಹಿಳೆಯರಿಗೆಗಾಗಿ ಸಾಕಷ್ಟು ಜನಪರ ಯೋಜನೆಗಳನ್ನು. ಜಾರಿಗೆ ತಂದಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ ಯುವತವಾದ ಶಿಕ್ಷಣವನ್ನು ನೀಡಬೇಕು, ಬಾಲ್ಯವಿವಾಹ ಹೆಚ್ಚುತ್ತಿವೆ ಅದರ ಬಗ್ಗೆ ಮಕ್ಕಳಲ್ಲಿ ಜಾಗೃತಿ ವಹಿಸಬೇಕು. ಪಾಲನೆ ಪೋಷಣೆ ಮಾಡಲು ಹೆಣ್ಣು ಬೇಕು ಆದರೆ ಹಣ್ಣು ಮಗಳು ಏಕೆ ಬೇಡಾ ಇದರಿಂದ ಮಹಿಳೆಯರ ಪ್ರಾಣ ಕಡಿಮೆ ಯಾಗುತ್ತಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದ ಬಸವ ಗೀತಾ ಗುರುಮಾತೆ ಗುರುಬಸವ ಮಠ ನಾಗನೂರ, ಬಸವ ಪ್ರಕಾಶ ಸ್ವಾಮಿಗಳು, ಪುರಸಭೆಯ ಅಧ್ಯಕ್ಷ ಅಶೋಕ ಸೂಳಿಭಾವಿ, ತಾಪಂ ಉಪಾಧ್ಯಕ್ಷೆ ರುಕಮ್ಮ ಪೂಜಾರಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಕೆಯ ಅಧಿಕಾರಿ ಖಾದರಬಿ ಲಕ್ಷೇಶ್ವರ, ಅವರಾದ ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಮೋಟೆ, ಮಹಾದೇವಿ ಹಲಗಿ, ಗಂಗಮ್ಮ ಬಾಳಿಕಾಯಿ, ಲಕ್ಷ್ಮವ್ವ ವಾರಿಮನಿ, ತಾಪಂ ಸದಸ್ಯೆ ಸುರೇಖಾ ಸೋಮಗೊಂಡ ಮೃಣಾಲಿಣಿ ಪಟ್ಟಣ, ಸುಂಮಗಲಾ ರಾಯಬಾಗ, ರೇಖಾ ಕಲಾಲ ಸಾವಿರಾರು ಮಹಿಳೆರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...