ಪುರಸಭೆ ಆಡಳಿತಕ್ಕೆ ಬೊಮ್ಮಾಯಿ ಮೆಚ್ಚುಗೆ

0
20
loading...

ಸವಣೂರ: ಪಟ್ಟಣವನ್ನು ಸುಂದರ ಹಾಗೂ ಸ್ವಚ್ಛವಾಗಿರಿಸಲು ಮನೆ ಮನೆಗೆ ತೆರಳಿ ಕಸ ಪಡೆಯುವ ಯೋಜನೆ ಉತ್ತಮವಾಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಪುರಸಭೆ ಆಡಳಿತ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತ ಪಡೆಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಮನೆ ಮನೆ ಕಸ ಪಡೆಯುವ ಸ್ವ ಸಹಾಯ ಸಂಘದ 32 ಪದಾಧಿಕಾರಿಗಳಿಗೆ(ಹೊರ ಗುತ್ತಿಗೆ ಪೌರ ಕಾರ್ಮಿಕರು) ತಳ್ಳುವ ಗಾಡಿ, ಕಸದ ಡಬ್ಬಿಗಳ ವಿತರಣೆ ಹಾಗೂ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಗಂಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪುರಸಭೆ ಪೌರ ಕಾರ್ಮಿಕರ ಕಾರ್ಯಕ್ಕೆ ಸ್ಥಳೀಯ ನಿವಾಸಿಗಳು ಸಹಕಾರವನ್ನು ನೀಡುವದು ಅವಶ್ಯವಾಗಿದೆ. ಯೋಜನೆಯಂತೆ ಪ್ರತಿ ಮನೆಗೆ ಆಗಮಿಸುವ ಕಾರ್ಮಿಕರಿಗೆ ಕಸವನ್ನು ವಿಂಗಡಿಸಿ ನೀಡುವ ಮೂಲಕ ಸಾರ್ವಜನಿಕರು ಪಟ್ಟಣವನ್ನು ಸ್ವಚ್ಛವಾಗಿಡಲು ಸಹಕಾರವನ್ನು ನೀಡಬೇಕು ಎಂದರು.

ಪುರಸಭೆ ಅಧ್ಯಕ್ಷ ಖಲಂದರಅಹ್ಮದ ಅಕ್ಕೂರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ರಾಜೇಶ್ವರಿ ಬುಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣಾ ಸಂಕ್ಲಿಪೂರ, ಸದಸ್ಯ ರಾಜೇಸಾಬ್ ಜಕಣಿ, ನಿಂಗಪ್ಪ ಮರಗಪ್ಪನವರ, ಮುಖ್ಯಾಧಿಕಾರಿ ಎ.ಎಚ್. ಕುಮಾರ, ಸಿಬ್ಬಂದಿಗಳಾದ ಆರ್.ಆರ್.ಮುಂಜೋಜಿ, ಎಂ.ಜಿ.ದೊಡ್ಡಣ್ಣವರ, ಮುಖಂಡರಾದ ಮೋಹನ ಮೆಣಸಿನಕಾಯಿ, ಮಹೇಶ ಸಾಲಿಮಠ ಹಾಗೂ ಇತರರು ಪಾಲ್ಗೊಂಡಿದ್ದರು.

loading...