ಪುರಸಭೆ ನಿರ್ಲಕ್ಷ್ಯ: ಸ್ವಚ್ಛತೆ ಕಾಣದ ಚರಂಡಿ

0
9
loading...

ಕನ್ನಡಮ್ಮ ಸುದ್ದಿ-ನರಗುಂದ: ನರಗುಂದ ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿಗೆ ಅನೇಕ ತಮ್ಮ ಕೆಲಸಗಳಿಗೆ ತೆರಳುವ ಜನತೆ ಮೂಗುಮುಚ್ಚಿಕೊಂಡೇ ಸಾಗಬೇಕಾದ ಅನಿವಾರ್ಯತೆ ಕಂಡು ಬಂದಿದೆ. ಚರಂಡಿಯ ಗಬ್ಬು ವಾಸನೆಯಿಂದ ಜನತೆ ವಿಚಲಿತರಾಗುತ್ತಿದ್ದಾರೆ.
ತೋಟಗಾರಿಕೆ ಕಚೇರಿ ಮುಂಭಾಗದ ಬೃಂದಾವನ ಹೊಟೆಲ್‌ದವರು ಚರಂಡಿಗಳ ಮೂಲಕ ಹರಿಬಿಟ್ಟ ಶೌಚಾಲಯ ಹಾಗೂ ಹೊಟೆಲ್‌ ಕಲ್ಮಶ ನೀರು ಚರಂಡಿಯಲ್ಲಿ ಸರಿಯಾಗಿ ಸಾಗುತಿಲ್ಲ. ಚರಂಡಿ ಪೈಪ್‌ ಒಡೆದು ಅನೇಕ ದಿನಗಳು ಕಳೆದಿವೆ. ಇದರ ದುರಸ್ತಿಕಾರ್ಯ ಪುರಸಭೆಯಿಂದ ಸರಿಯಾಗಿ ನಡೆದಿಲ್ಲ. ಪುರಸಭೆಗೆ ಅನೇಕ ಸಾರ್ವಜನಿಕರು ಮನವಿಮಾಡಿಕೊಂಡಿದ್ದರೂ ಈ ಸಮಸ್ಯೆ ಪರಿಹಾರ ಕಂಡಿಲ್ಲವೆಂದು ಸಾರ್ವಜನಿಕರಾದ ಇಟ್ಟಪ್ಪ ಕದಂ. ನಾಗಪ್ಪ ಸೊಟಕನಾಳ, ಅಜ್ಜಪ್ಪ ಮೈಲಾರಪ್ಪನವರ, ಸುರೇಶ ಚಲವಾದಿ, ಬಸಪ್ಪ ಕಣಕುಂಬಿ ಅನೇಕ ಸಾರ್ವಜನಿಕರು ಪುರಸಭೆ ಕಾರ್ಯವೈಖರಿ ಟೀಕಿಸಿದ್ದಾರೆ.

loading...