ಪುರುಷರ ಯಶಸ್ಸಿನ ಹಿಂದೆ ಮಹಿಳೆಯರ ಶ್ರಮವಿದೆ: ಹೆಗಡೆ

0
26
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಇಂದು ಎಲ್ಲ ವರ್ಗಗಳ ಮಹಿಳೆಯರೂ ಸಮಾಜದ ಮುಖ್ಯ ವಾಹಿನಿಯಲ್ಲಿ ದಾಪುಗಾಲಿಡುತ್ತಿದ್ದಾರೆ. ಮಹಿಳೆಯರಿಲ್ಲದೇ ಯಾವುದೇ ಕ್ಷೇತ್ರವೂ ಉದ್ದೇಶಿತ ಸಾಧನೆ ಮಾಡುವುದು ಅಸಾಧ್ಯ. ಪುರುಷರಿಗೆ ಸರಿಸಮಾನವಾಗಿ ವಿವಿಧ ಸವಾಲುಗಳನ್ನು ಸ್ವೀಕರಿಸುವ ಹೆಣ್ಣು ಖಂಡಿತ ಅಸಾಹಯಕಳಲ್ಲ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಹೇಳಿದರು.
ಪಟ್ಟಣದ ಗಾಂಧೀ ಕುಟೀರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ಸ್ರ್ತೀ ಶಕ್ತಿ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌ ಆರ್‌ ಹೆಗಡೆ ಮಾತನಾಡಿ, ಸಮಾಜವನ್ನು ಕಟ್ಟಿ ಬೆಳಸಿ, ಸಂಸ್ಕಾರ-ಸಂಸ್ಕೃತಿಯನ್ನು ಜೀವಂತವಾಗಿರುಸುವಲ್ಲಿ ಮಹಿಳೆಯರ ಸ್ಥಾನ ಮಹತ್ವದ್ದಾಗಿದ್ದು, ಪ್ರತಿ ಪುರುಷರ ಯಶಸ್ಸಿನ ಹಿಂದೆ ಮಹಿಳೆಯರ ಶ್ರಮವಿದೆ ಎಂದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಸುಜಾತಾ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ಕಾಪ್ಸೆ, ತಾಲ್ಲೂಕು ಕ್ರೀಡಾಧಿಕಾರಿ ನಾರಾಯಣ ನಾಯಕ, ಲಕ್ಷ್ಮೀ ನಾಯ್ಕ, ಸ್ರ್ತೀ ಶಕ್ತಿ ಸಂಘದ ತಾಲ್ಲೂಕು ಪ್ರಮಖೆ ನಯನಾ ಭಟ್ಟ ಉಪಸ್ಥಿತರಿದ್ದರು.
ಶಿಶು ಮತ್ತು ಮಹಿಳಾ ಅಭಿವೃದ್ದಿ ಇಲಾಖೆಯ ಅಧಿಕಾರಿ ಫಾತಿಮಾ ಚುಳಕಿ ಸ್ವಾಗತಿಸಿದರು. ಲಕ್ಷ್ಮೀ ಭಟ್ಟ ಚಿಮ್ನಳ್ಳಿ ನಿರೂಪಿಸಿದರು. ಲತಾ ಭಟ್ಟ ಪ್ರಾರ್ಥನೆ ಹಾಡಿದರು. ವೀರವ್ವ ಪೂಜಾರ ವಂದಿಸಿದರು. ನಂತರ ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

loading...