ಪೋಲಿಯೊ ನಿರ್ಮೂಲನೆಯಲ್ಲಿ ಸಂಘಸಂಸ್ಥೆಯ ಪಾತ್ರ ಮುಖ್ಯ: ಸಾಯೀಶ್‌

0
29
loading...

ಕನ್ನಡಮ್ಮ ಸುದ್ದಿ-ಕಾರವಾರ: ಸಂಘಸಂಸ್ಥೆಗಳ ಸಂಪೂರ್ಣ ಸಹಕಾರದಿಂದ ಪೋಲಿಯೊ ನಿರ್ಮೂಲನೆ ಮಾಡಲು ಸಾಧ್ಯ ಎಂದು ಲಯನ್ಸ್‌ ಡಿಸ್ಟ್ರಿಕ್ಟ್‌ ಗವರ್ನರ್‌ ಸಾಯೀಶ್‌ ಅನಂತ ಲಾವಂಡೆ ಹೇಳಿದರು.
ಅವರು ಆಝಾದ್‌ ಯುಥ್‌ ಕ್ಲಬ್‌, ಕಾರವಾರ ಕಲ್ಲೂರ್‌ ಎಜ್ಯುಕೇಶನ್‌ ಟ್ರಸ್ಟ್‌, ಹಾಗೂ ಲಯನ್ಸ್‌ ಕ್ಲಬ್‌ ಕಾರವಾರರವರು ಸಂಯುಕ್ತವಾಗಿ ಕೋಡಿಬಾಗದ ಆಝಾದ್‌ ಭವನದಲ್ಲಿ ಆರೋಗ್ಯ ಇಲಾಖೆಯವರ ಸಹಯೋಗದಲ್ಲಿ ಹಮ್ಮಿಕೊಂಡ ಎರಡನೇ ಸುತ್ತಿನ ಪಲ್ಸ್‌ ಪೋಲಿಯೋ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪೋಲಿಯೋ ಐದು ವರ್ಷದ ಒಳಗಿನ ಮಕ್ಕಳಿಗೆ ಬರುವಂತಹ ರೋಗ. ಈ ರೋಗ ಪೀಡಿತ ಮಕ್ಕಳು ಜೀವನ ಪರ್ಯಂತ ಇದರಿಂದ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ರೋಗ ಬರುವ ಮೊದಲೇ ಪಲ್ಸ್‌ಹನಿಯನ್ನು ಹಾಕಿಸಿ ಮಕ್ಕಳಿಗೆ ಆರೋಗ್ಯವನ್ನು ನೀಡಬೇಕು. ಗ್ರಾಮೀಣ ಭಾಗದಲ್ಲಿ ಇದರ ಬಗ್ಗೆ ಹೆಚ್ಚಿನ ಪ್ರಚಾರವನ್ನು ಮಾಡಿ ಎಲ್ಲಾ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕಾಗಿದೆ ಎಂದರು.
ವೇದಿಕೆಯ ಮೇಲೆ ರಾಷ್ಟ್ರ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ನಜೀರ್‌ ಅಹಮದ್‌ ಯು.ಶೇಖ್‌, ಲಯನ್ಸ್‌ ಕ್ಲಬ್‌ ಕಾರವಾರದ ಅಧ್ಯಕ್ಷರಾದ ಲ.ಅಲ್ತಾಫ್‌ ಶೇಖ್‌, ವಲಯ ಪ್ರಾಂತ ಪಾಲ ಲ.ಶಶಿಯಾನಂದ ಮಾಸೂರ್ಕರ್‌, ಡಾ. ವಿವೇಕ್‌ ಉಪಸ್ಥಿತರಿದ್ದರು. ಫೈರೋಜಾ ಬೇಗಂ ಶೇಖ್‌ ಸ್ವಾಗತಿಸಿದರು. ಲಯನ್ಸ್‌ ಕ್ಲಬ್‌ನ ಕಾರ್ಯದರ್ಶಿ ಇಬ್ರಾಹಿಂ ಕಲ್ಲೂರ್‌ ವಂದಿಸಿದರು.

loading...