ಪ್ರತ್ಯೇಕ ಲಿಂಗಾಯತವಾರೆ ಬೀದಿಗಿಳಿದು ಹೊರಾಟ

0
18
loading...

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಶತಶತಮಾನಗಳಿಂದ ವೀರಶೈವ ಹಾಗೂ ಲಿಂಗಾಯತ ಧರ್ಮ ಒಂದೇ ಆಗಿದ್ದು,ಆದರೆ ರಾಜ್ಯ ಸರಕಾರ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾಗಿದ್ದು,ಒಂದು ವೇಳೆ ಪ್ರತ್ಯೇಕ ಲಿಂಗಾಯತ ವರದಿ ಜಾರಿಯಾದರೆ ತಾಲೂಕಿನ ವೀರಶೈವ ಲಿಂಗಾಯತ ಮಠಾಧೀಶರು ಬೀದಿಗಳಿದು ಹೋರಾಟ ಮಾಡಲಾಗುವುದು ಎಂದು ತಾಲೂಕಿನ ಮಠಾಧೀಶರು ರಾಜ್ಯ ಸರಕಾರಕ್ಕೆ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಯಲಬುರ್ಗಾದ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ,ಸನಾತವಾದ ವೀರಶೈವ ಧರ್ಮ ವಿಶಾಲವಾದ ತಳಹದಿಯ ಮೇಲೆ ಇದೆ.ಈ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ.ಪರಂಪರೆಯಿಂದ ಎಲ್ಲಾ ಸಮಾಜದ ಸ್ವಾಮಿಗಳು ವೀರಶೈವ ಲಿಂಗಾಯತ ಪರಂಪರೆಯನ್ನು ಅತ್ಯಂತ ಗೌರವದಿಂದ ಕಾಣುತ್ತಾ ಬಂದಿದ್ದಾರೆ.
ಅದರಂತೆ ಭಕ್ತ ವರ್ಗವು ಕೂಡಾ ಸಮಾಜ ಮತ್ತು ಸಮಾಜದ ಗುರುಗಳ ಮೇಲೆ ಭಕ್ತಿ ಇಟ್ಟಿದ್ದಾರೆ. ವೀರಶೈವ ಲಿಂಗಾಯತ ಸಮಾಜಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವೇಶ್ವರರು ಎರಡು ಕಣ್ಣುಗಳು ಇದ್ದಂತೆ. ಆದ್ದರಿಂದ ಯಾರಿದಂಲೂ ಸಮಾಜ ಒಡೆಯುವ ಕಾರ್ಯ ಆಗಬಾರದು. ಧರ್ಮದಲ್ಲಿ ರಾಜಕೀಯ ಕಲಿತು, ವೀರಶೈವ ಲಿಂಗಾಯತ ಧರ್ಮ ಒಡೆಯುತ್ತಿದೆ. ವೀರಶೈವ ಲಿಂಗಾಯತ ಧರ್ಮ ಒಂದೇ. ರಾಜಕೀಯ ಲಾಭಕ್ಕಾಗಿ ಜಾತಿ-ಜಾತಿಗಳ, ಧರ್ಮ-ಧರ್ಮಗಳ ಮಧ್ಯೆ ಒಡಕು ಉಂಟು ಮಾಡುತ್ತಿರುವ ಕೆಲ ರಾಜಕೀಯ ನಾಯಕರ ಧರ್ಮ ವಿರೋಧಿ ನೀತಿ ಖಂಡಿಸಿರುವ ಶ್ರೀಗಳು, ನಾಗಮೋಹನದಾಸ್‌ ತಜ್ಞರು ವರದಿ ನೀಡಲು ಆರು ತಿಂಗಳ ಕಾಲವಕಾಶ ಕೋರಿತು. ಆದರೆ ಇನ್ನೂ ಆರು ತಿಂಗಳ ಆಗಿಲ್ಲ. ಆದರೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ತಜ್ಞರ ಸಮಿತಿ ನಡೆಸಿದ ವರದಿಯನ್ನು ಆರು ತಿಂಗಳಲ್ಲಿ ಕೊಡುವದಿಲ್ಲ ಎಂದು ಹೇಳಿತ್ತು. ತರಾತುರಿಯಲ್ಲಿ ವರದಿ ಸರಕಾರಕ್ಕೆ ಸಲ್ಲಿಸಿದೆ. ಆದರೆ ರಾಜ್ಯ ಸರಕಾರ ವೀರಶೈವ ಲಿಂಗಾಯತ ಧರ್ಮವನ್ನು ಒಡೆದು ಲಿಂಗಾಯತ ಪ್ರತ್ಯೇಕ ಧರ್ಮ ವರದಿ ಜಾರಿ ಮಾಡಲು ಮುಂದಾಗುತ್ತಿದೆ.
ಒಂದು ವೇಳೆ ಸರಕಾರ ಪ್ರತ್ಯೇಕ ಧರ್ಮದ ವರದಿ ಜಾರಿಯಾದರೆ ವೀರಶೈವ ಲಿಂಗಾಯತ ಮಠಾಧೀಶ್ವರು ಬೀದಿಗಳಿದು ಉಗ್ರ ಹೋರಾಟ ಮಾಡಲಾಗುವುದು. ಮುಂದಿನ ಚುನಾವಣೆಯಲ್ಲಿ ಸರಕಾರಕ್ಕೆ ತಕ್ಕ ಪಾಠ ಕಲಿಸಲಾಗುತ್ತದೆ.ಅದ್ದರಿಂದ ಸರಕಾರ ವೀರಶೈವ ಲಿಂಗಾಯತ ಧರ್ಮವನ್ನು ಇಬ್ಬಾಗ ಮಾಡಲು ಮುಂದಾಗಬಾರದು ಎಂದು ಯಲಬುರ್ಗಾದ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀಧರ ಮುರಡಿ ಹಿರೇಮಠದ ಷ.ಬ್ರ.ಬಸವಲಿಂಗೇಶ್ವರ ಸ್ವಾಮೀಜಿ, ಬೆದವಟ್ಟಿಯ ಹಿರೇಮಠದ ಶಿವಸಂಗಮೇಶ್ವರ ಸ್ವಾಮೀಜಿ,ಮಂಗಳೂರಿನ ಅರಳಿ ಹಿರೇಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ,ಕುಕನೂರಿನ ಅನ್ನದಾನೇಶ್ವರ ಶಾಖಾ ಮಠದ ಮಹಾದೇವ ದೇವರು ಎಚ್ಚರಿಸಿದರು.

loading...