ಪ್ರಧಾನಿ ವಿರುದ್ಧ ಸೋನಿಯಾ ವಾಗ್ದಾಳಿ

0
16
ಮುಂಬಯಿ: ಎಐಸಿಸಿ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿದ ಮೇಲೆ ಸೋನಿಯಾ ಗಾಂಧಿ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.
ಇಂಡಿಯಾ ಟುಡೇ  ಸಮಾವೇಶದಲ್ಲಿ ಮಾತನಾಡಿದ  ಅವರು, ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹರಣವಾಗುತ್ತಿದೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ, ಪ್ರತಿದಿನ ಭಯದಲ್ಲೇ ಬದುಕುವ ವಾತಾವರಣವಿದೆ, ಪ್ರತಿಭಟಿಸುವ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ, ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆ,ಸಮಾಜ ಧ್ರುವೀಕರಣದತ್ತ ಸಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿದೆ, ವಿರೋಧ ಪಕ್ಷಗಳು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಸಂಘಟನಾತ್ಮಕವಾಗಿ ಹೊಸ ಶೈಲಿಯಲ್ಲಿ ದೇಶದ ಅಭಿವೃದ್ಧಿ ಯಾಗಬೇಕೆಂದು ಕಾಂಗ್ರೆಸ್ ಬಯಸುತ್ತದೆ,  2004 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಯಾರು ಪಿಎಂ ಆಗಬೇಕೆಂಬ ಪ್ರಶ್ನೆ ಎದ್ದಿತ್ತು,  ಆದರೆ  ಮನಮೋಹನ್ ಸಿಂಗ್ ಅವರೇ ಸೂಕ್ತ ಎಂಬುದು ನನಗೆ ಎನ್ನಿಸಿತ್ತು ಎಂದು ಅವರು ತಿಳಿಸಿದ್ದಾರೆ.
loading...