ಫೆಬ್ರುವರಿ ತಿಂಗಳು ಕಬ್ಬಿನ ಗಾಣದಲ್ಲಿ ಹಬ್ಬದ ಸಂಭ್ರಮ

0
25
loading...

ಕನ್ನಡಮ್ಮ ಸುದ್ದಿ-ಕುಮಟಾ: ಗ್ರಾಮೀಣ ಭಾಗದಲ್ಲಿ ಫೆಬ್ರುವರಿ ತಿಂಗಳು ಬಂತೆಂದರೆ ಕಬ್ಬಿನ ಗಾಣದಲ್ಲಿ ಹಬ್ಬದ ಸಂಭ್ರಮ ಜೋರಾಗಿದ್ದು, ತಾಲೂಕಿನ ಮಿರ್ಜಾನ ಹೋಬಳಿ ವ್ಯಾಪ್ತಿಯ ಮೊರಬ ಸಮೀಪದ ಕೋಳಿ ಮಂಜುಗುಣಿಯಲ್ಲಿ ಕಬ್ಬು ಬೆಳೆಗಾರರು ಆಲೆಮನೆಯಲ್ಲಿ ಬೆಲ್ಲವನ್ನು ಸಿದ್ದಪಡಿಸಲು ನಿರತರಾಗಿದ್ದಾರೆ.
ಕಬ್ಬು ಬೆಳೆಗಾರರು ಮಾರ್ಚ ತಿಂಗಳಲ್ಲಿ ಹೊಲದಲ್ಲಿ ಬೀಜ ಬಿತ್ತಲಾಗುತ್ತದೆ. ನಿತ್ಯ ಹೊಲಕ್ಕೆ ನೀರುಣಿಸಿ ಬೀಜ ಸಸಿಯಾಗಿ ಕಬ್ಬಾಗಿ ಬೆಳೆಯುವರೆಗೆ ಒಂದು ವರ್ಷ ಕಳೆಯುತ್ತದೆ. ಕಬ್ಬು ಬೆಳೆದು ಕಬ್ಬಿಗೆ ಹೂ ಬಂದಾಗ ಅದನ್ನು ಕಟಾವು ಮಾಡಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ತಿಂಗಳಲ್ಲೆ ಕಬ್ಬು ಕಟಾವು ಮಾಡಲಾಗುತ್ತದೆ. ನಂತರ ಕಬ್ಬಿನ ಗದ್ದೆಯಲ್ಲಿ ಆಲೆಮನೆ ಜಿನುಗುಡುತ್ತದೆ. ಫೆಬ್ರುವರಿಯಿಂದ ಮಾರ್ಚ ತಿಂಗಳವರೆಗೆ ರೈತರು ಕಬ್ಬಿನ ಕಟಾವು ಕಾಯಕದಲ್ಲಿ ನಿರತರಾಗುತ್ತಾರೆ. ಹೀಗೆ ಕಟಾವು ಮಾಡಿದ ಕಬ್ಬನ್ನು ಸಂಗ್ರಹಿಸಿ ಕಬ್ಬಿನ ಗಾಣದತ್ತ ಚಪ್ಪರ ಹಾಕಲಾಗುತ್ತದೆ. ಜೋಡೆತ್ತುಗಳ ಗೆಜ್ಜೆಯ ಇಂಪಾದ ಶಬ್ದದೊಂದಿಗೆ ಗಾಣ ಸುತ್ತುತಲೆ ಗಾಣಕ್ಕೆ ಇಟ್ಟ ಕಬ್ಬು ರಸವಾಗಿ ಸಂಗ್ರಹವಾಗುತ್ತದೆ. ಕಾಲ ಬದಲಾದಂತೆ ರೈತರು ಕಬ್ಬಿನ ರಸವನ್ನು ಯಂತ್ರದ ಮೂಲಕವೇ ತೈಯಾರಿಸುವುದರಿಂದ ಇಂದು ಕಬ್ಬಿನ ಗಾಣದಲ್ಲಿ ಕೋಣಗಳು ಕಣ್ಮರೆಯಾಗಿದೆ. ಹಿಗಿದ್ದು ಗಾಣಕ್ಕೆ ಬಳಕ್ಕೆಯಾಗುತ್ತಿದ್ದ ಕೋಣಗಳಿಗಿಂತಲೂ ಯಂತ್ರದ ಬಳಕೆಯಿಂದ ಸಮಯದ ಉಳಿತಾಯವಾಗುತ್ತದೆ ಎನ್ನುತ್ತಾರೆ ರೈತರು.
ಅಲ್ಲದೇ ಸಾಂಪ್ರದಾಯಿಕ ರೈತರು ಕಬ್ಬಿನ ರಸದಿಂದ ಬೆಲ್ಲವನ್ನು ಮಾತ್ರ ತಯಾರಿಸಿದರೆ ಹಲವು ರೈತರು ಕಬ್ಬಿನಿಂದ ಉತ್ತಮ ಆದಾಯ ಪಡೆಯಲು ತುಳಸಿ ಹಬ್ಬದಂದು ಕಬ್ಬಿಗೆ ತುಂಬಾ ಬೇಡಿಕೆ ಇರುವುದರಿಂದ ಅಂದು ಕಬ್ಬನ್ನು ಮಾರಿ ಉತ್ತಮ ಲಾಭಾಂಶ ಪಡೆದರೆ, ಇನ್ನೂ ಕೆಲವರು ಯಂತ್ರದ ಮೂಲಕ ಕಬ್ಬಿನ ಜ್ಯೂಸ್‌ ಮಾಡಿ ಲಾಭ ಪಡೆಯುತ್ತಾರ. ಇಲಿ, ನರಿ, ಹಂದಿ, ಅಳಿಲುಗಳ ಕಾಟದಿಂದ ಕಬ್ಬನ್ನು ರಕ್ಷಿಸಲು ರಾತ್ರಿ ಆಲೆಮನೆಯಲ್ಲಿ ಕಾವಲು ಕಾಯಲಾಗುತ್ತದೆ. ಫೆಬ್ರುವರಿ ಮಾರ್ಚ ತಿಂಗಳಲ್ಲಿ ಹಬ್ಬದ ವಾತಾವರಣ ಕಲ್ಪಿಸುವ ಆಲೆಮನೆಯಲ್ಲಿ ಬಂದವರಿಗೆ ತಿನ್ನಲು ಕಬ್ಬು ಕುಡಿಯಲು ಕಬ್ಬಿನ ರಸ ಕೊಟ್ಟು ಜನರ ಪ್ರಿತ್ಯಾಧಾರ ಪಡೆಯುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ಆದರೆ ಇಂದು ಹಲವು ಆಲೆಮನೆಗಳು ಮುಚ್ಚಿಹೋಗಿ ಬಿಕೋ ಎನ್ನುತ್ತಿರುವಾಗಲೂ ಅಲ್ಲಲ್ಲಿ ಆಲೆಮನೆಗಳು ಸಂಭ್ರಮಿಸುತ್ತಿರುವುದು ಸಂತಸದ ಸಂಗತಿಯಾಗಿದೆ.

loading...