ಬಂಧಿತ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯ

0
14
loading...

ಕನ್ನಡಮ್ಮ ಸುದ್ದಿ-ಹೊನ್ನಾವರ: ತಾಲೂಕಿನ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಲು ಕಳೆದ ಹಲವಾರು ವರ್ಷಗಳಿಂದ ಕರಾವಳಿ ಭಾಗದಲ್ಲಿ ಅಕ್ರಮ ಗೋಸಾಗಾಟ ನಡೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಹಿಂದುಗಳ ಶೃದ್ಧಾಬಿಂದುಗಳಲ್ಲಿ ಒಂದಾಗಿರುವ ಪವಿತ್ರ ಗೋವುಗಳ ರಕ್ಷಣೆಯ ಸಂಬಂಧ ಆಗಾಗ ಪ್ರತಿರೋಧ ನಡೆಯುತ್ತಿರುವುದರಿಂದ ಕಳ್ಳ ಸಾಗಾಟ ಸ್ವಲ್ಪಮಟ್ಟಿಗೆ ನಿಯಂತ್ರಣದಲ್ಲಿರುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಪುನ: ಈ ಅಕ್ರಮ ಚಟುವಟಿಕೆ ಎಗ್ಗಿಲ್ಲದೆ ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮಾಧನಗೇರಿ ಹಾಗೂ ಶಿರಾಲಿ ಚೆಕ್‌ ಪೊಸ್ಟ್‌ಗಳಿದ್ದರೂ ಈ ಕಳ್ಳಸಾಗಾಟ ನಡೆಯುತ್ತಿರುವುದು ಅನುಮಾನಕ್ಕೆ ಕಾರಣವಾಗುತ್ತದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯ ಜಾಣ ಕುರುಡುತನ ಕಂಡು ಬೇಸತ್ತ ಕೆಲವು ಬಿಸಿರಕ್ತದ ತರುಣರು ಇಂತಹ ಗೋವುಗಳ ರಕ್ಷಣೆಗೆ ಸಹಜವಾಗಿ ಮುಂದಾಗುತ್ತಿದ್ದಾರೆ. ಇದಕ್ಕೆ ಕರ್ಕಿ ಗ್ರಾಮದಲ್ಲಿ ನಡೆದ ಘಟನೆಯೇ ಸಾಕ್ಷಿ. ಹಲವಾರು ಹಸುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವಾಗ ಒಂದು ಹಸು ಸತ್ತಿರುವುದು ಪ್ರತ್ಯಕ್ಷ ಕಂಡು ಬಂದು ಸಂಗತಿ.
ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಎಂತಹ ಹಿಂಸಾತ್ಮಕ ಘಟನೆ ನಡೆದರೂ ಯಾರೊಬ್ಬರೂ ಕೂಡ ಪರಸ್ಪರ ಸಹಾಯ ಮಾಡಲು ಮುಂದಾಗಲಾರರು. ಇಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಎಲ್ಲ ಪ್ರಕರಣಗಳಲ್ಲೂ ಕನಿಷ್ಟ 150 ಜನ ಆರೋಪಿಗಳ ಯಾದಿ ಮಾಡಲಾಗುತ್ತಿದ್ದು, ಇದರ ದುರುಪಯೋಗವಾಗುವ ಎಲ್ಲ ಸಂಭವನೀಯತೆ ಇರುತ್ತದೆ. ಜನ ಸಾಮಾನ್ಯರ ರಕ್ಷಣೆಗೆ ಇರುವ ಪೋಲಿಸ ಇಲಾಖೆ ಇಂತಹ ಕ್ರಮಗಳಿಂದ ವಿಶ್ವಾಸ ಕಳೆದುಕೊಳ್ಳುತ್ತಿದೆ. ಇದನ್ನು ಇಲ್ಲಿಯೇ ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನರ ಆಕ್ರೋಶ ಸ್ಪೋಟಗೊಂಡು ಆಗುವ ಅಹಿತಕರ ಘಟನೆಗಳಿಗೆ ತಾವೇ ಜವಾಬ್ದಾರರಾಗುತ್ತೀರಿ.
ಈ ಸಂದರ್ಭದಲ್ಲಿ ಜೆ.ಟಿ.ಪೈ, ವಿಶ್ವನಾಥ ನಾಯ್ಕ, ರಾಜು ಭಂಡಾರಿ, ವೆಂಕಟ್ರಮಣ ಹೆಗಡೆ, ಶ್ರೀಕಲಾ ಶಾಸ್ತ್ರಿ, ಸುಬ್ರಹ್ಮಣ್ಯ ಶಾಸ್ತ್ರಿ, ಎಸ್‌.ಟಿ.ನಾಯ್ಕ, ಸಂಜು ಶೇಟ್‌, ಉಮೇಶ ಸಾರಂಗ, ಲೋಕೇಶ ಮೇಸ್ತ, ಉಮೇಶ ಮೇಸ್ತ ಉಪಸ್ಥಿತರಿದ್ದರು.

loading...