ಬಸವಣ್ಣವರ ತತ್ವ ಅಳವಡಿಕೆಯಿಂದ ಜೀವನ ಸಾರ್ಥಕ: ಸಂಪಾದನಾ ಶ್ರೀಗಳು

0
24
loading...

ಕನ್ನಡಮ್ಮ ಸುದ್ದಿಚಿಕ್ಕೋಡಿ 28: ಬಸವಣ್ಣನವರ ಸಪ್ತಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದರೇ ಜೀವನ ಸಾರ್ಥಕವಾಗುತ್ತದೆ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು ಹೇಳಿದರು.ಡೋಣೆವಾಡಿಯಲ್ಲಿ ಜೊಲ್ಲೆ ಉದ್ಯೋಗ ಸಮೂಹ ಹಾಗೂ ಶಾಸಕರ ನಿಧಿ ಸೇರಿದಂತೆ 10 ಲಕ್ಷ ರೂಗಳ ಅಂದಾಜಿನ ಭವ್ಯ ಆಶ್ವಾರೂಢ ಜಗಜ್ಯೋತಿ ಬಸವೇಶ್ವರರವರ ಕಂಚಿನ ಮೂರ್ತಿ ಅನಾವರಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ,ಚಿಕ್ಕೋಡಿ ತಾಲೂಕಿನಲ್ಲಿ ಅತೀ ದೊಡ್ಡದಾರ ಕಂಚಿನ ಪುತ್ಥಳಿ ಅನಾವರಣ ಇದಾಗಿದ್ದು, ಜೊಲ್ಲೆ ದಂಪತಿಗಳು ಸಮಾಜದ ಮೇಲಿಟ್ಟಿರುವ ಕಾಳಜಿ ಶ್ಲಾಘನೀಯವಾಗಿದೆ ಎಂದರು.ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಜಗಜ್ಯೋತಿ ಬಸವೇಶ್ವರ ಅವರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಹೆಚ್ಚಿನ ಸ್ಥಾನ ಮಾನಗಳನ್ನು ನೀಡಿ ವಚನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.ಇಂದಿನ ಯುವಕರು ಬಸವಣ್ಣನವರ ಕಾಲದ ಶಿವಶರಣರ ವಚನಗಳನ್ನು ಅಥೈಸಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.ಜಿ.ಪಂ ಸದಸ್ಯ ಸುಮಿತ್ರಾ ಉಗಳೆ,ಗ್ರಾಮ ಪಂಚಾಯತಿ ಅಧ್ಯಕ್ಷೆ ಸಂಪದಾ ಜಾಧವ, ತಾ.ಪಂ ಸದಸ್ಯ ತಾತ್ಯಾಸೋ ನರಾಟೆ,ವಿರೇಂದ್ರ ಮಾನೆ, ಪವನ ಪಾಟೀಲ,ರಾಮಗೌಡಾ ಪಾಟೀಲ,ಶ್ರೇಣಿಕ ಪಾಟೀಲ, ಎಪಿಎಂಸಿ ಸದಸ್ಯ ನಿತೇಶ ಖೋತ,ಎಸ್‌.ಕೆ.ಮಾಳಿ,ಜನಾರ್ಧನ ಘಾಟಗೆ,ಸುರೇಖಾ ಪಾಟೀಲ, ಮಂಗಳ ಸಾಧಳಕರ,ಲತಾ ಕಳವೆ, ಸಂಜು ಸಂಕಪಾಳ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ದೀಪಕ ಮಾಳಿ ಸ್ವಾಗತಿಸಿದರು.ಅಶೋಕ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

loading...