ಬಸ್‌ ಸಂಚಾರದಲ್ಲಿ ವ್ಯತ್ಯಯ ಎಬಿವಿಪಿಯಿಂದ ಪ್ರತಿಭಟನೆ

0
15
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ದಾಂಡೇಲಿಯಿಂದ ಹಳಿಯಾಳಕ್ಕೆ ಸಂಚರಿಸುವ ಹಲವು ಬಸ್ಸುಗಳು ಸುಮಾರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಂಚರಿಸದೇ ವ್ಯತ್ಯಯವಾದ ಕಾರಣ ತೊಂದರೆಗೊಳಗಾದ ವಿದ್ಯಾರ್ಥಿಗಳು ದಾಂಡೇಲಿ ಬಸ್‌ ನಿಲ್ದಾಣದಲ್ಲಿಯೇ ಎ.ಬಿ.ವಿ.ಪಿ ನೇತೃತ್ವದಲ್ಲಿ ಬಸ್ಸುಗಳನ್ನು ತಡೆದು ಪ್ರತಿಭಟಿಸಿದರು.
ವಿದ್ಯಾರ್ಥಿಗಳು ಬಸ್‌ ತಡೆದು ಪ್ರತಿಭಟಿಸುತ್ತಿದ್ದರೂ ಬಸ್‌ ನಿಲ್ದಾಣದಲ್ಲಿದ್ದ ನಿಯಂತ್ರಣಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದು ಸಮಸ್ಯೆ ಪರಿಶೀಲಿಸದೇ ನಿಂತಿದ್ದು ಕಂಡುಬಂತು. ನಂತರ ಸಾರ್ವಜನಿಕರು ನಿಯಂತ್ರಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅದೇ ಸಂದರ್ಭದಲ್ಲಿ ಅಲ್ಲಿಗಾಗಮಿಸಿದ ಮಾಜಿ ಶಾಸಕ ಸುನೀಲ ಹೆಗಡೆ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದರಲ್ಲದೇ, ನಿಯಂತ್ರಣಾಧಿಕಾರಿಗಳು ಹಾಗೂ ಘಟಕ ವ್ಯವಸ್ಥಾಪಕರ ಜೊತೆ ದೂರವಾಣಿಯಲ್ಲಿ ಮಾತನಾಡಿ ಬಸ್‌ ಬಿಡಿಸುವ ವ್ಯವಸ್ಥೆ ಮಾಡಿದರು. ನಗರ ಠಾಣೆಯ ಪಿ.ಎ.ಐ ಪ್ರವೀಣಕುಮಾರ ಬಸ್‌ ಒಂದರ ಚಾಲಕನ ಮನವೊಲಿಸಿ ಹಳಿಯಾಳಕ್ಕೆ ಬಸ್‌ ಬಿಡುವ ವ್ಯವಸ್ಥೆ ಮಾಡಿದರು. ಎ.ಬಿ.ವಿ.ಪಿ ನೇತೃತ್ವ್ವದಲ್ಲಿ ವಿದ್ಯಾರ್ಥಿಗಳು ಬಸ್‌ ತಡೆದು ಪ್ರತಿಭಟನೆ ನಡೆಸುವ ವೇಳೆ ಸ್ಥಳಕ್ಕಾಗಮಿಸಿದ ಮಾಜಿ ಶಾಸಕ ಸುನೀಲ ಹೆಗಡೆ ಸಾರಿಗೆ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿ ತಕ್ಷಣ ಬಸ್‌ ಬಿಡುವಂತೆ ತಾಕೀತು ಮಾಡಿದರು. ಜೊತೆಗೆ ಪಿ.ಎಸ್‌.ಐ ಪ್ರವೀಣ ಕುಮಾರವರಿಗೂ ಸಮಸ್ಯೆ ಪರಿಹರಿಸುವಂತೆ ತಿಳಿಸಿದರು. ನಂತರ ಪಿ.ಎಸ್‌.ಐ ಪ್ರವೀಣ ಕುಮಾರ ವಿದ್ಯಾರ್ಥಿಗಳ ಸಮಸ್ಯೆ ಅರಿತು ತಕ್ಷಣ ಬೇರೊಂದು ಬಸ್ಸನ್ನು ಚಾಲಕನೋರ್ವನ ಮನವೊಲಿಸಿ ಬಿಡಿಸುವಲ್ಲಿ ಯಶಸ್ವಿಯಾಾದರು.

loading...