ಬಾಕಿ ವೇತನ ಪಾವತಿಗೆ ಒತ್ತಾಯಿ ಪೌರಕಾರ್ಮಿಕರ ಧರಣಿ

0
17
loading...

ಗಂಗಾವತಿ: ನಗರಸಭೆಯಲ್ಲಿ ಹೊರಗುತ್ತಿಗೆ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ 162 ಜನ ಪೌರಕಾರ್ಮಿಕರಿಗೆ 8 ತಿಂಗಳ ಬಾಕಿ ವೇತನ ಮತ್ತು 22 ತಿಂಗಳಿನ ವ್ಯತ್ಯಾಸದ ವೇತನ, ಭವಿಷ್ಯನಿಧಿ ಬಾಕಿಯನ್ನು ತಕ್ಷಣ ಪಾವತಿಸುವಂತೆ ಒತ್ತಾಯಿಸಿ ಕಾರ್ಮಿಕರು ಮಂಗಳವಾರ ದಿಢೀರ್ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕಾರ್ಮಿಕ ಮುಖಂಡ ಜೆ.ಭಾರದ್ವಾಜ ನಗರಸಭೆ ಆಡಳಿತ ಮಂಡಳಿ ಮತ್ತು ಪೌರಾಯುಕ್ತ ಖಾಜಾಮೊಹಿನುದ್ದೀನ ಅವರು ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು.
8 ತಿಂಗಳ ಬಾಕಿ ವೇತನ ಹಾಗೂ 22 ತಿಂಗಳಿನ ವ್ಯತ್ಯಾಸ ವೇತನ ಬಾಕಿ ಉಳಿಸಿಕೊಂಡಿರುವುದರಿಂದ ಕಾರ್ಮಿಕ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ನಲುಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ನಗರದ ಮಲ-ಮೂತ್ರ ಸ್ವಚ್ಛಗೊಳಿಸುವ ಬೀದಿ ಬದಿಯ ಧೂಳು, ಕಸಗೂಡಿಸಿ ನಗರವನ್ನು ಸುಂದರೀಕರಣಗೊಳಿಸುವ ಕಾರ್ಮಿಕರ ಜೀವನ ವೇತನವಿಲ್ಲದೆ ಬೀದಿಗೆ ಬಿದ್ದಿದೆ ತಕ್ಷಣ ಬಾಕಿ ವೇತನ ಪಾವತಿಸಬೇಕು ಎಂದು ಅವರು ಒತ್ತಾಯಿಸಿದರು. ಪ್ರಗತಿಪರ ಪೌರಕಾರ್ಮಿಕರ ಸಂಘದ ಅಧ್ಯಕ್ಷರ ಪರಶುರಾಮ ಮಾತನಾಡಿ ಬಾಕಿ ವೇತನ ಪಾವತಿಸದಿದ್ದರೆ ಉಗ್ರರೂಪದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

loading...