ಬಾಲಕಿಯ ಮೇಲೆಯ ಅತ್ಯಾಚಾ ಖಂಡಿಸಿ ಪ್ರತಿಭಟನೆ

0
13
loading...

ಸಿಂದಗಿ: ಮುದ್ದೆಬಿಹಾಳ ತಾಲೂಕಿನ ನಾಗಬೇನಾಳ ಗ್ರಾಮದಲ್ಲಿ ಕುರುಬ ಸಮಾಜದ ಬಾಲಕಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ತಾಲೂಕಾ ಕುರುಬರ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ತಹಸಿಲ್ದಾರ ಅರುಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಕನಕದಾಸ ವೃತ್ತದಿಂದ ಸ್ವಾಮಿವಿವೇಕಾನಂದ ವೃತ್ತದ ಮೂಲಕ ಪ್ರತಿಭಟನೆಯ ರ್ಯಾಲಿಯನ್ನು ನಡೆಸಿ ತಹಶೀಲ್ದಾರರವರಿಗೆ ಮನವಿಯನ್ನು ನೀಡಲಾಯಿತು.
ಇದೆ ಸಂದರ್ಭದಲ್ಲಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಸುಧರ್ಶನ ಜಿಂಗಾಣ್ಣಿ, ದಲಿತ ವಿದ್ಯಾರ್ಥಿ ಪರಿಷತ ಅಧ್ಯಕ್ಷ ಹರ್ಷವರ್ದನ ಪೂಜಾರಿ, ಗಾಣಿಗ ಸಮಾಜದ ಅಧ್ಯಕ್ಷ ನಿಂಗರಾಜ ಬಗಲಿ, ಶಿಲ್ಪಾ ಕುದರಗೊಂಡ ಮಾತನಾಡಿ, ಮುದ್ದೆಬಿಹಾಳ ತಾಲೂಕಾ ನಾಗಬೇನಾಳ ಗ್ರಾಮದಲ್ಲಿ ಕುರುಬಸಮಾಜದ ಬಾಲಕಿ ಹಾಗೂ ವಿವಿಧ ಗ್ರಾಮಗಳಲ್ಲಿ ಹೆಣ್ಣು ಮಕ್ಕಳಮೇಲೆ ಅತ್ಯಾಚಾರ ನಡೆಯುತ್ತಿದ್ದು ಸರಕಾರ ಮತ್ತು ಜಿಲ್ಲಾಡಳಿತ ಈ ಅತ್ಯಾಚಾರಗಳನ್ನು ತಡೆಗಟ್ಟುವಲ್ಲಿ ವಿಪಲರಾಗಿದ್ದು ಕೂಡಲೆ ಜಿಲ್ಲಾಡಳಿತ ಮತ್ತು ಸರಕಾರ ಇತಂಹ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಅಲ್ಲದೆ ಇತಂಹ ಪ್ರಕರಣಗಳಲ್ಲಿ ರಾಜಕಿಯ, ಜಾತಿ ಸೇರಿದಂತೆ ಯಾವುದೆ ತಾರತಮ್ಯವನ್ನು ಮಾಡದೆ ಆರೋಪಿಗಳಿಗೆ ಯಾವುದೆ ರೀತಿಯಲ್ಲಿ ಬೆಂಬಲ ನೀಡದೆ ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕು, ಇಲ್ಲದಿದ್ದರೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿಜಯಪುರ ಜಿಲ್ಲಾ ಬಂದ್‌ ಕರೆ ನೀಡಲಾಗುದು ಎಂದು ಎಚ್ಚರಿಕಿ ನೀಡಿದರು.
ಪ್ರತಿಭಟನೆಯಲ್ಲಿ ಸಿಂದಗಿ ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಶರಣಪ್ಪ. ಮ. ಹಿರೆಕುರುಬರ, ಪ್ರಧಾನ ಕಾರ್ಯದರ್ಶಿ ಸೋಮು ಹೂಗಾರ, ಕೆಂಚಪ್ಪ ಪೂಜಾರಿ, ಪರಶುರಾಮ ಕೊಟಾರಗಸ್ತಿ, ವಿನೋದ ಗೊಬ್ಬುರ, ಸುನಂದಾ ಯಪೊಂರೆ, ರಾಯಣ್ಣ ಗಡೆದ, ಸಂಜನಾ ಬಜಂತ್ರಿ, ಧರೆಪ್ಪ ಮನಗೂಳಿ, ಚಂದ್ರು ದೊಡಮನಿ, ಭೀಮಾಶಂಕರ ರತ್ನಾಕರ, ಸಂಗು ಹೊಸಮನಿ, ಜಟ್ಟೆಪ್ಪ ಹೊಸಮನಿ, ಕಿರಣಗೌಡ ಮೊರೆ, ಮಲ್ಲಿಕಾರ್ಜುನ ನಾಟಿಕಾರ, ಸುನೀಲ ಕಟ್ಟಿಮನಿ, ಅನೀಲಕುಮಾರ ಮುಲಿಮನಿ, ಕಾಜು ಬಂಕಲಗಿ, ಸಮೀರ ಗುಂದಗಿ, ಸೊಹೆಲ್‌ ಗುಂದಗಿ, ಮಂಜು ಚೌವಾಣ, ಪ್ರವೀಣ ಬುಳ್ಳಾ ಸೇರಿದಂತೆ ಹಲವರಿದ್ದರು.

loading...