ಬಾಲ್ಯಾವಸ್ಥೆ ಬೆಳವಣಿಗೆಗೆ ಮೌಲ್ಯಯುತ ಅವಕಾಶ: ಸತೀಶ ಜಾರಕಿಹೊಳಿ

0
52
loading...

ಅಥಣಿ 05: ಬಾಲ್ಯಾವಸ್ಥೆ ಬೆಳವಣಿಗೆಗೆ ಒಂದು ಮೌಲ್ಯಯುತ ಅವಕಾಶ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ, ಎಂದು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಥಳಿಯ ಶಿವಣಗಿ ಸಂಸ್ಕೃತಿಕ ಭವನದಲ್ಲಿ ಇಲ್ಲಿಯ ಸಾಯಿ ಸಂಗಮ ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆಯವರು ಆಯೋಜಿಸಲಾಗಿದ್ದ \”ಚಿಂತನ 2018 \”ರ ಪ್ರತಿಭಾಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಅವರು, ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆ ಸಾಮಾನ್ಯವೆನಲ್ಲ, ಅವರೂ ಸಹ ನಗರ ವಿದ್ಯಾರ್ಥಿಗಳಿಗಿಂತ ಒಳ್ಳೆಯ ಪ್ರತಿಭಾಶಾಲಿಗಳಾಗಿದ್ದಾರೆ. ಅವರಿಗೆ ಯೋಗ್ಯ ಮಾರ್ಗದರ್ಶನ ಅತ್ಯವಶ್ಯ, ಅಲ್ಲದೆ ಸತತ ಪರಿಶ್ರಮ ಶ್ರದ್ಧೆ ಬೆಳಿಸಿಕೊಳ್ಳಬೇಕು. ಆಗ ಮಾತ್ರ ಅವರೂ ಸಹ ದೇಶದ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು. ಇಂತ ಒಂದು ಕಾರ್ಯಕ್ರಮ ಆಯೋಜಿಸಿ, ಒಳ್ಳೆ ಪ್ರತಿಭೆ ಪ್ರೋತ್ಸಾಹಿಸಿ ಸಮಾಜಕ್ಕೆ ಪರಿಚಯಿಸುವ ಮೂಲಕ ಇನ್ನೊಬ್ಬರಿಗೆ ಸ್ಪೂರ್ತಿ ನೀಡುತ್ತಿರುವ,ಈ ಬುಟಾಳೆ ಪರಿವಾರದ ಕಾರ್ಯ ಪ್ರಶಂಸನೀಯ ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಗೋಕಾಕದಲ್ಲಿ ಸತೀಶ ಅವಾಡ್ರ್ಸ ಮೂಲಕ ಪ್ರತಿಭಾವಂತರನ್ನು ನಾಡಿಗೆ ಪರಿಚಯಿಸುವ ಕಾರ್ಯ ನಡೆಯುತ್ತಿದೆ. ನಮ್ಮ ವಿದ್ಯಾರ್ಥಿಗಳು ಮುಂದೆ ಬರಲು ಇಂತಹ ವೇದಿಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಸಂಸ್ಥೆಯ ಆಧಾರಸ್ತಂಭವಾದ ಸದಾಶಿವ ಕೆ. ಬುಟಾಳಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕಿನ 71 ಪ್ರೌಢಶಾಲೆಗಳ 210 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ಈ ಪೈಕಿ 10 ಜನರನ್ನು \”ಟಾಪ್‌ ಟೆನ್‌\” ಎಂದು ಘೋಷಿಸಿ ಪ್ರಶಸ್ತಿ ಪತ್ರ ವಿತರಿಸಲಾಯಿತು.\” ಟಾಪ್‌ 10 ಎಂಬವುದು \”ವಿದ್ಯಾರ್ಥಿಗಳಿಗೆ ಸ್ಪೂೕರ್ತಿಯ ಸೆಲೆಯಾಗಿತ್ತು. ಸಂಸ್ಥೆಯ ಅಧ್ಯಕ್ಷರಾದ ಯುವ ನೇತಾ ಮಲ್ಲಿಕಾರ್ಜುನ ಬುಟಾಳಿ ಸ್ವಾಗತ ಬಯಸಿದರು. ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ಮುಖಂಡರಾದ ಕಿರಣಕುಮಾರ ಪಾಟೀಲ, ಮಹೇಶ ಕುಮಠಳ್ಳಿ, ಅರ್ಷದ ಗದ್ಯಾಳ, ಕೋಕಟನೂರಿನ ಕಾಡದೇವರಮಠ, ಶಾಮರಾವ ಪೂಜಾರಿ, ವಿಠಪ್ಪ ದೇಸಾಯಿ, ಸಲಾಂ ಖಲಿ, ರಾವಸಾಹೇಬ ಐಹೋಳಿ, ಜಿ.ಎಂ. ಹಿರೇಮಠ, ರಮೇಶ ಸಿಂದÀಗಿ, ಸತೀಶ ಪಾಠನಕರ, ಬಸವರಾಜ ತೇರದಾಳ ,ಮಹೇಶ ಪಟ್ಟಣ, ಬಸನಗೌಡಾ ಪಾಟೀಲ, ಮಹೇಶ ಅಪ್ಪಾಜಿ, ಶ್ರೀಮತಿ ಎಸ್‌.ಎ. ನಾಯಿಕ, 2018 ರ ಚಿಂತನಾ ಸಂಚಾಲಕರಾದ ಅಭಯ ಸಗರೆ, ಸಚಿನ ಅವಟಿ, ಶಶಿ ಸಾಳವೆ, ಬಸವರಾಜ ಉಮರಾಣಿ, ಸುಭಾಷ ಪಾಠನಕರ, ಅನಿಲ ಸುಣಧೋಳಿ, ಸಂಗಮೇಶ ಅಲಿಬಾದಿ ಇತರರು ಇದ್ದರು. ವಿಜಯ ಹುದ್ದಾರ ನಿರೂಪಿಸಿದರು. ಶ್ರಿಶೈಲ ಬಡಕಂಬಿ ಪ್ರಾಸ್ತಾವಿಕ ಮಾತನಾಡಿದರು. ಶ್ರಿಕಾಂತ ಪೂಜಾರಿ ವಂದಿಸಿದರು.

loading...