ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ: ಶಾಸಕ ವಿಶ್ವನಾಥ

0
31
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಜೆಪಿ ಪರ ಪ್ರಚಾರ ಭರದಿಂದ ಸಾಗಿದ್ದು, ಯುವಕರು ಕೃಷಿಕರು ನೌಕರದಾರು ಸಾಮಾಜಿಕ ಚಿಂತಕರು ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.
ಸೋಮವಾರ ಪಟ್ಟಣದ ವಾರ್ಡ ನಂ.10 ರಲ್ಲಿ ಬರುವ ಬಸವ ನಗರದಲ್ಲಿ ಬಿ.ಜೆ.ಪಿ ಪ್ರಚಾರ ಪ್ರಾರಂಭಿಸಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳು, ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪನವರ ಜನಪರ ಯೋಜನೆಗಳು ಜನಸಾಮಾನ್ಯರ ಉದ್ದಾರ ಮಾಡುವದರೊಂದಿಗೆ ದೇಶವನ್ನು ಅಭಿವೃದ್ದಿ ಪತದತ್ತ ಮುನ್ನೆಡೆಸುತ್ತಿದೆ ಎಂದರು. ತಮ್ಮ 5ವರ್ಷದ ಅಧಿಕಾರವಧಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು.
ಪ್ರಚಾರ ಕಾರ್ಯದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಮಡಿವಾಳಪ್ಪಾ ಹೋಟಿ, ರಾಮನಗೌಡ ಪಾಟೀಲ, ಸಂಜು ಗಡತನ್ನವರ, ಬಸವರಾಜ ಮೂಗಿ, ಬಸವರಾಜ ದುಗ್ಗಾಣಿ, ಈಶ್ವರ ಕೊಪ್ಪದ, ಶ್ರೀಶೈಲ ಆಲದಕಟ್ಟಿ, ಶ್ರೀಶೈಲ ಶರಣಪ್ಪನವರ, ಮಹಾಂತೇಶ ಹರಕುಣಿ, ಗಂಗಾಧರ ವಾಲಿ, ಡಿ. ಆರ್‌. ಜೊಶಿ, ಡಾ. ಸುರೇಶ ನವಲಗುಂದ, ಅವ್ವಕ್ಕನವರ, ವಿಠ್ಠಲ ಅಂದಾನಿ, ವಿಠ್ಠಲ ಕಡಕೋಳ, ಅಶೋಕ ಜವಳಿ, ನೀಲಪ್ಪ ಕಲ್ಲೂರ, ಪ್ರಕಾಶ ಯಡಾಲ, ಮಾರುತಿ ಕೊಂಡೂರ, ಸಂಜು ಪದ್ಮನ್ನವರ, ಸುರೇಶ ಯರಗಟ್ಟಿ, ಆನಂದ ನಾಶಿಪುಡಿ, ಬೊಮ್ಮನಾಯ್ಕ ಪಾಟೀಲ, ಬಾಬು ಸಂಗೋಳ್ಳಿ, ಈರಣ್ಣ ಸಿದ್ದಮನಿ, ಆರ್‌. ಎಲ್‌ ಪಾಟೀಲ, ಸಂಜಯ ಗಿರೆಪ್ಪಗೌಡರ, ಮುದಕಪ್ಪ ತೋಟಗಿ, ಮಹೇಶ ಹರಕುಣಿ, ಶಿವಪ್ಪ ಮತ್ತಿಕೊಪ್ಪ, ಅಶೋಕ ಮೂಗಬಸವ, ವಿಶಾಲ ಹೊಸೂರ, ಆನಂದ ಮೂಗಿ, ಶಾಂತವೀರ ಕುಡಸೋಮಣ್ಣವರ, ಉಮೇಶ ಮುಪ್ಪಯ್ಯನವರಮಠ, ಬಾಳನಗೌಡ ಪಾಟೀಲ, ವಿಜಯ ಪಾಟೀಲ, ಮಂಜು ಕಲ್ಲೋಳ್ಳಿ, ಬಾಬಣ್ಣ ಪಾಟೀಲ, ಮಡಿವಾಳಪ್ಪಾ ಚಿಕ್ಕೋಪ್ಪ, ಶಿವಪ್ರಸಾದ ಪಾಟೀಲ, ಬಾಳೇಶ ಮಾವಿನಕಟ್ಟಿ, ಬಸವರಾಜ ನೇಸರಗಿ, ಈಶ್ವರ ಬೋರಕನವರ, ಗಂಗಾಧರ ಹರಕುಣಿ, ಬಿ.ಜೆ.ಪಿ ಕಾರ್ಯಕರ್ತರು, ಯುವಕರು ಹಾಗೂ ಎಲ್ಲ ಬಿ.ಜೆ.ಪಿ ಪದಾಧಿಕಾರಿಗಳು ವಾರ್ಡ ನಂ. 10 ರಲ್ಲಿಯ ಮನೆ-ಮನೆಗೆ ತೆರಳಿ ಕರ ಪತ್ರ ಹಂಚುವುದರ ಮೂಲಕ ಬಿಜೆಪಿ ಪ್ರಚಾರ ಕೈಗೊಂಡರು.

loading...