ಬಿಜೆಪಿಯಿಂದ ಪಾರದರ್ಶಕ ಆಡಳಿತ: ಆಶೀಷ್ ಶೇಲಾರ

0
29
loading...

ಚಿಕ್ಕೋಡಿ 15: ದೇಶದೆಲ್ಲೆಡೆ ಪಾರದರ್ಶಕ, ಭ್ರಷ್ಟಾಚಾರಮುಕ್ತ ಆಡಳಿತಕ್ಕೆ ಪ್ರಥಮ ಆದ್ಯತೆ ನೀಡುವ ಏಕೈಕ ಪಕ್ಷ ಬಿಜೆಪಿ ಎಂದು ಮುಂಬೈನ ಬಿಜೆಪಿ ಪ್ರಭಾರಿ, ಶಾಸಕ ಆಶೀಷ ಶೇಲಾರ ತಿಳಿಸಿದರು.
ಅವರು ನಿಪ್ಪಾಣಿ ಸಮೀಪದ ಶ್ರೀಪೆವಾಡಿಯ ಶಿವಶಂಕರ ಜೊಲ್ಲೆ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಆಯೋಜಿಸಿದ್ದ ನಿಪ್ಪಾಣಿ ನಗರ ಹಾಗೂ ಗ್ರಾಮೀಣ ಭಾಗದ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಸಬಕಾ ಸಾಥ್ ಸಬಕಾ ವಿಕಾಸ ಎಂಬ ಘೊಷಣೆಯೊಂದಿಗೆ ದೇಶದ ಆಡಳಿತವನ್ನು ನೀಡುತ್ತಾ, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಶ್ರಮಿಸುತ್ತಿದ್ದಾರೆ.

ಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಲು ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಲು ಸನ್ನದ್ಧರಾಗಬೇಕಾಗಿದೆ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ನಡೆ, ಶ್ರೇಷ್ಠ ಭಾರತ ನಿರ್ಮಾಣದ ಪರಿಕಲ್ಪನೆ ಹಾಗೂ ನವ ಭಾರತಕ್ಕಾಗಿ ಅವರು ಕೈಗೊಂಡಿರುವ ಅಭಿವೃದ್ಧಿ, ಜನಪರ ಕಾರ್ಯಗಳನ್ನು ಕೇವಲ ದೇಶದ ಜನರಲ್ಲದೇ, ಇಡೀ ಜಗತ್ತಿನ ಜನರೇ ಕೊಂಡಾಡುವಂತಾಗಿದೆ ಎಂದರು

ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಆಡಳಿತವಿದ್ದರೂ ನಿಪ್ಪಾಣಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಕೋಟ್ಯಾಂತರ ರೂ.ಗಳ ಅನುದಾನ ಮಂಜೂರು ಮಾಡಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮುಂಬರುವ ಚುನಾವಣೆಯಲ್ಲಿ ವಿರೋಧಿಗಳು ಜನತೆಗೆ ಹಾಗೂ ಕಾರ್ಯಕರ್ತರಿಗೆ ಹಲವಾರು ಭರವಸೆ, ಆಮಿಷಗಳನ್ನು ನೀಡಬಹುದು. ಆದ್ದರಿಂದ ಯಾರೂ ಕೂಡ ಅವರ ಪೊಳ್ಳು ಆಮಿಷಗಳಿಗೆ ಬಲಿಯಾಗದೇ ಕಳೆದ ಐದು ವರ್ಷದಲ್ಲಾದ ಕ್ಷೇತ್ರದ ಅಭಿವೃದ್ಧಿಯನ್ನು ಮನವರಿಕೆ ಮಾಡಿಕೊಂಡು ಬಿಜೆಪಿಯನ್ನು ಬೆಂಬಲಿಸಬೇಕೆಂದು ಎಂದು ಹೇಳಿದರು.
ಹೈದ್ರಾಬಾದ-ಕರ್ನಾಟಕದ ಬಿಜೆಪಿ ಪ್ರಭಾರಿ ಸತ್ಯಜೀತ್, ಉಜ್ವಲಾ ಬಡನ್ನಾಚೆ, ಬಾಬಾಜಿ ದೇಸಾಯಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.

ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಶಿಕಾಂತ ನಾಯಿಕ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬಸವಪ್ರಸಾದ ಜೊಲ್ಲೆ, ಬಿಜೆಪಿ ನಗರಾಧ್ಯಕ್ಷ ಜಯವಂತ ಭಾಟಲೆ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಸಂಚಾಲಕರಾದ ಎಂ.ಪಿ. ಪಾಟೀಲ, ಸಮೀತ ಸಾಸನೆ, ರಾಮಗೌಡ ಪಾಟೀಲ, ಎಪಿಎಂಸಿ ಸದಸ್ಯ ಅಮೀತ ಸಾಳವೆ, ರಾಹುಲ ಪಾಟೀಲ, ಮೋಹನ ಸಾದಳಕರ, ಸಂಜಯ ಶಿಂತ್ರೆ, ನೀತೇಶ ಖೋತ, ಜಿ.ಪಂ. ಸದಸ್ಯ ಸಿದ್ದು ನರಾಟೆ, ಸುಮಿತ್ರಾ ಉಗಳೆ, ತಾ,ಪಂ. ಸದಸ್ಯ ಸದಾಶಿವ ಬೂದಿಹಾಳೆ, ಅನಿತಾ ದೇಸಾಯಿ, ದತ್ತಾತ್ರಯ ವಡಗಾವೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ನ್ಯಾಯವಾದಿ ಸಂಜಯ ಶಿಂತ್ರೆ ಸ್ವಾಗತಿಸಿದರು. ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ ವಂದಿಸಿದರು.

loading...