ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ : ಪರಮೇಶ್ವರ

0
29
loading...

ಕನ್ನಡಮ್ಮ ಸುದ್ದಿ-ಘಟಪ್ರಭಾ : ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಕಾರ್ಯಕರ್ತರದ್ದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪಕ್ಷದ ಸಾಧನೆಗಳನ್ನು ವಿವರಿಸುವಂತೆ ಬಿಜೆಪಿ ಮುಖಂಡ ಹಾಗೂ ಜಿ.ಪಂ ಮಾಜಿ ಸದಸ್ಯ ಪರಮೇಶ್ವರ ಹೊಸಮನಿ ಹೇಳಿದರು.
ಸಮೀಪದ ಅರಭಾವಿಯಲ್ಲಿ ಸೋಮವಾರದಂದು ಅರಭಾವಿ ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ಮುಷ್ಠಿಧಾನ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲಿಕ್ಕೆ ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯದಲ್ಲಿ ಹೊಸ ದಾಖಲೆ ಬರೆಯಲು ಇದೊಂದು ಸುವರ್ಣಾವಕಾಶ ಇದ್ದು, ಜನಪರ ಹಾಗೂ ರೈತಪರ ಯೋಜನೆಗಳ ಜಾರಿಗಾಗಿ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಕೋರಿದರು. ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹಾಗೂ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಬಿಜೆಪಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ ಮಾತನಾಡಿದರು.
ರಾಮಣ್ಣಾ ಬಂಡಿ, ಮುತ್ತೆಪ್ಪ ಝಲ್ಲಿ, ರಮೇಶ ಮಾದರ, ಬಸವರಾಜ ಮಾಳೇದವರ, ವಿಠ್ಠಲ ದೇವುಗೋಳ, ನಿಂಗಪ್ಪ ಮಾಳ್ಯಾಗೋಳ, ಬಸವಂತ ಕಮತಿ, ಹಣಮಂತ ತೇರದಾಳ, ಅಶೋಕ ಪರುಶೆಟ್ಟಿ, ನಿಂಗಪ್ಪ ಇಳಿಗೇರ, ಅಶೋಕ ಖಂಡ್ರಟ್ಟಿ, ವಿಠ್ಠಲ ಪಾಟೀಲ, ಭೀಮಪ್ಪ ಹಳ್ಳೂರ, ಮಹಾದೇವ ತಾಂಬಡಿ, ಶಂಕರ ಗೋರಖನಾಥ, ಹೊನ್ನಜ್ಜ ಕೋಳಿ, ದುಂಡಪ್ಪ ಮಾಳ್ಯಾಗೋಳ, ಸಿದ್ದಪ್ಪ ಹಮ್ಮನವರ, ಪರಶುರಾಮ ಗದಾಡಿ, ಭೈರು ಯಕ್ಕುಂಡಿ, ಬಸವರಾಜ ಪಂಡ್ರೊಳ್ಳಿ, ಕೆಂಚಪ್ಪ ಮಂಟೂರ, ರಮೇಶ ಸಂಪಗಾಂವಿ, ಯಮನಪ್ಪ ಬಾಗಾಯಿ, ಮನು ಗಡಾದ, ಇಮಾಮ ಮೋಮಿನ, ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

loading...