ಬಿಜೆಪಿ ಸುಳ್ಳು ಭರವಸೆ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ: ಸಚಿವ ರಮೇಶ

0
29
loading...

ಕನ್ನಡಮ್ಮ ಸುದ್ದಿ-ಗೋಕಾಕ: ಮುಂಬರುವ ವಿಧಾನ ಸಭಾ ಚುನಾವಣೆಯು ಬಂಡವಾಳ ಶಾಯಿ ಹಾಗೂ ಜನಸಾಮಾನ್ಯರ ನಡುವಿನ ಯುದ್ಧವಾಗಿದ್ದು ಸತ್ಯಕ್ಕೆ ನಿಶ್ಚಿತವೆಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು, ರವಿವಾರದಂದು ಗೋಕಾಕ ಮತಕ್ಷೇತ್ರದ ಮರಡಿಮಠ ಗ್ರಾಮದಲ್ಲಿ ಜನರನ್ನುದ್ಧೇಶಿಸಿ ಮಾತನಾಡುತ್ತ ಬಿಜೆಪಿ ಪಕ್ಷ ಬಂಡವಾಳ ಶಾಯಿಗಳ ಪರವಿದ್ದು ಜನಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದೆ. ಸುಳ್ಳು ಭರವಸೆಗಳನ್ನು ನೀಡುತ್ತ ಜನರನ್ನು ದಾರಿ ತಪ್ಪಿಸುತ್ತಿದ್ದು ಜನತೆ ಇವರಿಗೆ ತಕ್ಕ ಪಾಠ ಕಲಿಸುವಂತೆ ಕರೆ ನೀಡಿದರು.
ಸಂವಿಧಾನವನ್ನು ಬದಲಿಸುವ ಹಾಗೂ ಇಂದಿರಾ ಗಾಂಧಿಯವರು ಜಾರಿಗೆ ತಂದ ಉಳುವವನೆ ಭೂಮಿಯ ಒಡೆಯ ಮತ್ತು ಮೀಸಲಾತಿಯಂತ ಕಾನೂನುಗಳನ್ನು ಬದಲಿಸುವ ಚಿಂತನೆಯಲ್ಲಿ ಬಿಜೆಪಿ ಬಂಡವಾಳ ಶಾಯಿಗಳ ಪರವಾಗಿ ಬಡವರ, ಹಿಂದುಳಿದ ವರ್ಗಗಳ ವಿರೋಧಿಯಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ಜನಪರ ಯೋಜನೆಗಳೊಂದಿಗೆ ದೇಶದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜನತೆ ಕಾಂಗ್ರೇಸ್‌ ಪಕ್ಷಕ್ಕೆ ಆಶೀರ್ವಧಿಸುವಂತೆ ಕೋರಿದರು.
ಇದೇ ಸಂದರ್ಭದಲ್ಲಿ ಕೊಣ್ಣೂರು ಪಟ್ಟಣದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಪವಾಡೇಶ್ವರ ಮಹಾಸ್ವಾಮಿಗಳು, ಜಿಪಂ ಸದಸ್ಯರಾದ ಟಿ ಆರ್‌ ಕಾಗಲ, ಮಡ್ಡೆಪ್ಪ ತೋಳಿನವರ, ಕೊಣ್ಣೂರ ಪಪಂ ಅಧ್ಯಕ್ಷೆ ಸವಿತಾ ಕುರಣಗಿ, ಉಪಾಧ್ಯಕ್ಷ ಮಾರುತಿ ಪೂಜಾರಿ, ಮುಖಂಡರಾದ ಪ್ರಕಾಶ ಕರನಿಂಗ, ವಿನೋದ ಕರನಿಂಗ, ಕಾಡಪ್ಪ ಹುಕ್ಕೇರಿ, ಮಾರುತಿ ಗಾಡಿವಡ್ಡರ, ವಿಠ್ಠಲ ಸಿಂಧಿಹಟ್ಟಿ, ಕೆಂಪಣ್ಣ ಕೋಳಿ, ಇಮ್ತೀಯಾಜ ಪೀರಜಾದೆ, ಬಾಹುಬಲಿ ಪಾಟೀಲ, ಕವಿತಾ ಪಾಟೀಲ, ಯಲ್ಲಪ್ಪ ಗುಡ್ಡಾಕಾರ ಸೇರಿದಂತೆ ಅನೇಕರು ಇದ್ದರು.

loading...