ಬಿ.ಎಸ್‌.ಎನ್‌.ಎಲ್‌ ನೆಟ್‌ವರ್ಕ್‌ ಸಮಸ್ಯೆಗೆ ಶೀಘ್ರ ಪರಿಹಾರ: ನಜೀರ್‌ ಶೇಖ

0
21
loading...

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರದಲ್ಲಿ ಕೆಲವೊಂದಿಷ್ಟು ಬಿ.ಎಸ್‌.ಎನ್‌.ಎಲ್‌. ನೆಟವರ್ಕ್‌ನ ಸಮಸ್ಯೆಗಳಿರುವುದು ನಿಜ. ಈಗಾಗಲೇ ಆ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆದಿದೆ. ಶೀಘ್ರದಲ್ಲಿ ಎಲ್ಲ ನೆಟ್‌ವರ್ಕ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಬಿ.ಎಸ್‌.ಎನ್‌.ಎಲ್‌. ಕಾರವಾರದ ಡಿ.ಜಿ.ಎಮ್‌. ನಜೀರ್‌ ಶೇಖ ತಿಳಿಸಿದರು.
ಹಳೆ ದಾಂಡೇಲಿಯಲ್ಲಿ ಈಗಾಗಲೆ ಹೊಸ ಟಾವರ್‌ ನಿರ್ಮಿಸಿದ್ದು, ಇನ್ನು ಒಂದು ತಿಂಗಳೊಳಗೆ ಅದು ಕಾರ್ಯಾರಂಬಿಸಲಿದೆ. ಆಗ ಒಂದಿಷ್ಟು ಸಿಗ್ನಲ್‌ ಸಮಸ್ಯೆ ಕಡಿಮೆಯಾಗಲಿದೆ. ಟೌನ್‌ಶಿಪ್‌ನಲ್ಲಿ ಮತ್ತೊಂದು ಟಾವರ್‌ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರಸಭೆಯಿಂದಲೂ ಸ್ಥಳಾವಕಾಶ ಕೇಳಲಾಗಿತ್ತು. ಆದರೆ ಸಾದ್ಯವಾಗಿಲ್ಲ. ಕೆಲವೇ ದಿನದಲ್ಲಿ ಟೌನ್‌ಶಿಪ್‌ನಲ್ಲಿ ಟಾವರ್‌ ನಿರ್ಮಿಸಿ ಒತ್ತಡ ಕಡಿಮೆ ಮಾಡಲಾಗುವುದು. ಈ ಭಾಗದ ಬೇಡಿಕೆಯಂತೆ ಈಗಾಗಲೇ ದಾಂಡೇಲಿ ಿ ಕೇಂದ್ರಕ್ಕೆ ಓರ್ವ ಜೆ.ಟಿ.ಓ. ತಂತ್ರಜ್ಞರನ್ನು ನಿಯೋಜಿಸಲಾಗಿದೆ. ಅವರು ತಮ್ಮ ಕಾರ್ಯ ಅರಂಭಿಸಿದ್ದಾರೆ. ಕಾರ್ಯಲಯದೊಳಗಿನ ಒಟ್ಟು ಐವರು ಸಿಬ್ಬಂದಿಗಳನ್ನು ಕ್ಷೇತ್ರ ಕಾರ್ಯಕ್ಕೆ ನಿಯೋಜಿಸಲಾಗಿದೆ. ಇನ್ನು ಅವಶ್ಯವಿರುವ ಸಿಬ್ಬಂದಿಗಳನ್ನು ಸದ್ಯದಲ್ಲಿಯೇ ನೇಮಿಸಲಾಗುವುದು. ಸ್ಥಿರ ದೂರವಾಣಿ ಹಾಗೂ ಬ್ರಾಡ್‌ಬೆಂಡ್‌ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಈಗಾಗಲೇ ಅರಂಭವಾಗಿದೆ. ಕೆಲ ದಿನಗಳ ವರೆಗೆ ಸಾರ್ವಜನಿಕರು ಸಹಕರಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿಭಾಗೀಯ ಅಭಿಯಂತರ ಜಿ.ಎನ್‌. ಲಿಂಗಾರೆಡ್ಡಿ, ಕಾರವಾರದ ಕಾರ್ಯಲಯ ಅಧಿಕ್ಷಕ ಎಮ್‌.ಎಮ್‌. ಹೆಗಡೆ, ದಾಂಡೇಲಿ ಕಾರ್ಯಲಯದ ಅಧಿಕಾರಿ ಯಶೋದಾ ಶಾನಭಾಗ ಮುಂತಾದವರಿದ್ದರು.

loading...