ಬೂತ್‌ ರಕ್ಷಣೆ ಹೊಣೆ ಕಾರ್ಯಕರ್ತರದ್ದು: ಶ್ರೀರಾಮುಲು

0
26
loading...

ಅಥಣಿ 24: ಸೈನಿಕರು ಗಡಿ ಕಾಯುವಂತೆ ಬಿಜೆಪಿಯ ಕಾರ್ಯಕರ್ತರು ರಾಜ್ಯದಲ್ಲಿ 224 ನವ ಶಕ್ತಿ ಕೇಂದ್ರಗಳನ್ನು ಕಟ್ಟಿ, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ತರಬೇಕೆಂದು ಬಳ್ಳಾರಿಯ ಸಂಸದ ಶ್ರೀರಾಮಲು ಕರೆ ಕೊಟ್ಟರು.ಸ್ಥಳಿಯ ಸೋಶಿಯಲ್‌ ಸ್ಪೋಟ್ರ್ಸ ಕ್ಲಬ್‌ದಲ್ಲಿ ಬಿಜೆಪಿ ಯುವ ಮೋರ್ಚಾ ಮಂಡಲದಿಂದ ಆಯೋಜಿಸಲಾಗಿದ್ದ ನವಶಕ್ತಿ ಕೇಂದ್ರ ಉದ್ಘಾಟನೆಯಲ್ಲಿ ಮಾತನಾಡುತ್ತಿದ್ದರು. ಸಿಎಂ ಸಿದ್ದರಾಮಯ್ಯನವರು ಕೃಷ್ಣಾ ಎ ಸ್ಕಿಮ್‌, ಬಿ ಸ್ಕಿಮ್‌ ಯೋಜನೆಗಳ ಬಗ್ಗೆ ಮಾತು ಕೊಟ್ಟಂತೆ ನಡೆಯಲಿಲ್ಲ. 3000 ರೈತರ ಆತ್ಮಹತ್ಯೆ ನಡೆದವು. ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆತ್ಮಹತೆÀ್ಯಗಳ ಬಗ್ಗೆ ತಡೆಯಿಲ್ಲ. ನುಡಿದಂತೆ ನಡೆಯದೆ ಕಾಂಗ್ರೆಸ್‌ ಪಕ್ಷವನ್ನು ಅಧೋಗತಿಗೆ ತಂದ್ದಿದ್ದಾರೆ. ಇವರ ಕಾರ್ಯಕ್ಷಮತೆ ಹಾಗೂ ಸ್ಥಿತಿಗತಿಯ ಬಗ್ಗೆ ಅಪರಾಧಗಳ ಲೆಕ್ಕವಿಲ್ಲ. ಜನ ಬೇಸತ್ತಿದ್ದಾರೆ. ನಿನ್ನೆ ಸಂಜೆಯ ಸಮೀಕ್ಷೆಯ ಪ್ರಕಾರ ಬಿ ಜೆ ಪಿ ಗೆ 121 ಸೀಟು ಖಾತ್ರಿಯಾಗಿದೆ. ಇನ್ನು ರಾಷ್ಟ್ರ ಮಟ್ಟದ ಧುರೀಣರು ಅಮೀತ ಶಹಾ ಬಂದುಹೋದರೆ 150 ಸೀಟು ಕಟ್ಟಿಟ್ಟಬುತ್ತಿ. ಇದಲ್ಲದೇ ವಾಟ್ಸಪ್‌ 300 ಗ್ರುಪ್‌ ಪ್ರಾರಂಭವಾಗಿವೆ. ಇಲ್ಲಿ ಚುನಾವಣೆಯ ಜಯಭೇರಿಗಾಗಿ ಪರಸ್ಪರ ಸಂರ್ಪಕವಿರುತ್ತದೆ. ಗುಡ್‌ ಮಾರ್ನಿಂಗ್‌ ,ಗುಡ್‌ ನೈಟ್‌, ಗೀಫ್ಟದಂತ ಮಾತುಗಳು ಬೇಡ ಒಳ್ಳೆಯ ಸುದ್ದಿಗಳು ವಿನಯೋಗಿಸಿಕೊಳ್ಳಿ ಎಂದರು.  ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿದರು. ವೇದಿಕೆಯ ಮೇಲೆ ಪರಪ್ಪ ಸವದಿ, ಅರಟಾಳದ ರಾಮಣ್ಣ ಪೂಜಾರಿ, ಚಿದಾನಂದ ಸವದಿ, ಗುರು ದಾಶ್ಯಾಳ, ರವಿ ಹಿರೇಮಠ, ಗುರುರಾಜ ಹುದ್ದಾರ, ಸಿದ್ದಪ್ಪ ಮುದಕಣ್ಣವರ, ಶಕುಂತಲಾ ದಿವಾನಮಳ,ವೆಂಕಣ್ಣ ಅಸ್ಕಿ, ಸುಶೀಲಕುಮಾರ ಪತ್ತಾರ, ಪ್ರಭಾಕರ ಚವ್ಹಾಣ ಮೊದಲಾದವರಿದ್ದರು.

loading...