ಬೆರೆಡೆಗೆ ಸಾಗಿಸಲು ಇಟ್ಟ ಅನ್ಯಭಾಗ್ಯ ಅಕ್ಕಿ ವಶ

0
22
loading...

ಕನ್ನಡಮ್ಮ ಸುದ್ದಿ-ರಾಮದುರ್ಗ: ಅನ್ನಭಾಗ್ಯ ಅಕ್ಕಿಯನ್ನು ಬೆರೆಡೆಗೆ ಸಾಗಿಸಲು ಸಂಗ್ರಹಿಸಿದ್ದ ಗೋದಾಮು ಮೇಲೆ ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ ಆರ್‌.ವಿ.ಕಟ್ಟಿ ದಾಳಿ ನಡೆಸಿ 121 ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಪಟ್ಣಣದ ಎ.ಪಿ.ಎಂ.ಸಿ ಯಲ್ಲಿರುವ ಮುಳ್ಳೂರ ಎಂಬುವರಿಗೆ ಸೇರಿದಂತೆ ಗೋದಾಮು ಬಾಡಿಗೆ ಪಡೆದ ಸ್ಥಳೀಯ ಮಡ್ಡಿಗಲ್ಲಿಯ ಮೌಲಸಾಬ ಹಸನಸಾಬ ಮನಗೂಳಿ ಎಂಬುವರು ಈ ಸಾರ್ವಜನಿಕ ಪಡಿತರ ವಿತರಣಾ ಆಹಾರ ಧಾನ್ಯವನ್ನು ಗೋದಾಮಿನಲ್ಲಿ ಸಂಗ್ರಹಿಸಿ ಅಕ್ಕಿಚೀಲಗಳನ್ನು ಸಣ್ಣ ಸಣ್ಣ ಪಾಕೀಟಗಳನ್ನಾಗಿ ಬೇರ್ಪಡಿಸಿ ಬೇರೆಡೆ ಸಾಗಿಸಲು ತಯಾರಿ ನಡೆಸಿದ್ದರು.
ಮಂಗಳವಾರ ಗೋದಾಮಿನಲ್ಲಿ ಪಡಿತರ ಆಹಾರ ಧಾನ್ಯವನ್ನು ಅಕ್ರವಾಗಿ ಸಂಗ್ರಹಿಸಿ ಬೇರೆಡೆಗೆ ಸಾಗಿಸುವ ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ ದಾಳಿ ನಡೆಸಿದಾಗ ಅಲ್ಲಿ ಸಂಗ್ರಹಿಸಿದ್ದ ಪಡಿತರ ಧಾನ್ಯ ಸಿಕ್ಕಿದೆ.
ಈ ಘಟನೆ ಕುರಿತು ರಾಮದುರ್ಗ ಪೊಲೀಸ್‌ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ದಾಳಿಯ ನೇತೃತ್ವವನ್ನು ತಹಶೀಲ್ದಾರ ಆರ್‌.ವಿ.ಕಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ಖಾದರಬಿ ಲಕ್ಷ್ಮೇಶ್ವರ, ಪಿ.ಎಸ್‌.ಐ ಸುನಿಲಕುಮಾರ ನಾಯಕ್‌, ಆಹಾರ ನಿರೀಕ್ಷಕರಾದ ಎಂ.ಪಿ.ಬಂಟನೂರ, ಸುರೇಶ ಹಮ್ಮನ್ನವರ, ಕಂದಾಯ ನಿರೀಕ್ಷಕ ಆರ್‌.ಐ ಬಸರಗಿ, ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

loading...