ಬೆಳವಡಿ ಮಲ್ಲಮ್ಮ ಉತ್ಸವದ ನಿಮಿತ್ಯ ಗುಂಡೆತ್ತುವ ಸ್ಪರ್ಧೆ

0
22
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಈಶಪ್ರಭು ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ವತಿಯಿಂದ ಬೆಳವಡಿ ಉತ್ಸವ ಅಂಗವಾಗಿ ನಡೆದ ಸಂಗ್ರಾಣಿ (ಗುಂಡು) ಕಲ್ಲು ಎತ್ತುವ ಸ್ಪರ್ಧೆ ರೋಚಕವಾಗಿ ನಡೆಯಿತು.
ಕಟ್ಟು ಮಸ್ತಾದ ದೇಹ ದಾಡ್ರ್ಯ ಹೊಂದಿದ್ದ ಪೈಲ್ವಾನರು ನೂರಾರು ಕೆಜಿ ಭಾರದ ಗುಂಡು ಕಲ್ಲುಗಳನ್ನು ಎತ್ತಿ ನೋಡುಗರ ಹುಬ್ಬೆರಿಸುವಂತೆ ಮಾಡಿದರು. ಸುತ್ತಲೂ ನಿಂತು ನೋಡುತ್ತಿದ್ದ ಜನ ಸಿಳ್ಳೆ, ಚಪ್ಪಾಳೆ ಹಾಕಿ ಪ್ರೋತ್ಸಾಹಿಸಿದರು. ವಿಜಯಪುರದಿಂದ ಬಂದಿದ್ದ ಶಿವನಿಂಗಪ್ಪ ಶಿವೂರ 185 ಕೆಜಿ ಭಾರದ ಗುಂಡು ಕಲ್ಲು ಎತ್ತಿ ಮೊದಲ ಸ್ಥಾನ, ಮುದ್ದೇಬಿಹಾಳದ ಚಂದ್ರಶೇಖರ ಎಳವರ 174 ಕೆಜಿ ಭಾರ ಎತ್ತಿ ಎರಡನೇ ಸ್ಥಾನ, ಕುಮಾರ ಶಿದ್ರಾಯಿಜಗದೇವ್‌ ಮೂರನೇ ಸ್ಥಾನ, ಇಬ್ರಾಹೀಂ ಅರಬ್‌ ನಾಲ್ಕನೇ ಸ್ಥಾನ ಗಳಿಸಿ ಗೆಲುವಿನ ಕೇಕೆ ಹಾಕಿದರು. ಬೆಳಗಾವಿ ಯುವ ಜನ ಮತ್ತು ಸಬಲೀಕರಣ ಕ್ರೀಡಾ ಇಲಾಖೆ ಉಪ ನಿರ್ದೇಶಕ ಸಿ.ಬಿ. ರಂಗಯ್ಯ ಸ್ಪರ್ಧೆ ಉದ್ಘಾಟಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಈರಣ್ಣ ಕರಿಕಟ್ಟಿ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿದರು.

loading...