ಬೈಲಹೊಂಗಲ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ

0
33
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ – ಆಧಾರ ತಿದ್ದುಪಡಿ ಕೇಂದ್ರದಲ್ಲಿ ಗೊಂದಲ ನಿವಾರಣೆ ಆಗುವ ಹಂತ ಕಾಣುತ್ತಿಲ್ಲ ಮತ್ತೆ ವಿಳಂಬ ಖಂಡಿಸಿ ಅರ್ಜಿದಾರರು, ನಾಗರಿಕರು ಪಟ್ಟಣದ ತಹಶೀಲ್ದಾರ ಕಚೇರಿ ಆವರಣದ ಆಧಾರ ನೊಂದಣಿಯ ಪಡಸಾಲೆ ಮುಂದೆ ಬುಧವಾರ ಸಂಜೆ ದಿಢೀರ್‌ ಪ್ರತಿಭಟನೆ ನಡೆಸಿದರು.ರೈತ ಮುಖಂಡ ನಿಂಗಪ್ಪಾ ಚೌಡಣ್ಣವರ ಮಾತನಾಡಿ, ಕೇಂದ್ರ ಪ್ರಾರಂಭವಾದಾಗಿನಿಂದ ಆಧಾರ ಪಡಸಾಲೆಯಲ್ಲಿ ನಾಗರಿಕರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದು, ಕಂಪ್ಯೂಟರ್‌ ಆಪರೇಟರ್‌ ಆನಂದ ಕರಡಿಗುದ್ದಿ ಸರ್ವರ್‌ ಪ್ರಾಬ್ಲಂ ನೆಪ ಹೇಳುತ್ತಿದ್ದಾನೆ. ಆತನು ದಿನಂ ಪೂರ್ತಿ ಕೇವಲ 10 ಮಾತ್ರ ತಿದ್ದುಪಡಿ ಮಾಡುತ್ತಿದ್ದು, ನೂರಾರು ಜನರು ಬರಿಗೈಯಲ್ಲಿ ಮರಳುತ್ತಿದ್ದಾರೆ.
ಹತ್ತಾರು ಬಾರೀ ನಾಗರಿಕರು ಪ್ರತಿಭಟಿಸಿದರೂ ಕೂಡ ಅಧಿಕಾರಿಗಳು ಸರಿಪಡಿಸುವ ಗೋಜಿಗೆ ಹೊಗುತ್ತಿಲ್ಲ. ಬೈಲಹೊಂಗಲ ತಾಲೂಕು ಸುಮಾರು 80 ಹಳ್ಳಿಗಳನ್ನು ಒಳಗೊಂಡಿದ್ದು, ಒಂದೇ ತಿದ್ದುಪಡಿ ಕೇಂದ್ರ ಇರುವುದರಿಂದ ಗ್ರಾಮೀಣ ಜನತೆ ತಮ್ಮ ದಿನನಿತ್ಯದ ಕೆಲಸಗಳನ್ನು ಬಿಟ್ಟು ಬೆಳಗ್ಗೆ ಸರದಿ ಸಾಲಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ನುರಿತ ಆಪರೇಟರ್‌ ನೇಮಕ ಮಾಡಬೇಕು ಮತ್ತು ಇನ್ನೊಂದು ಆಧಾರ ತಿದ್ದುಪಡಿ ಪಡಸಾಲೆ ಕೇಂದ್ರ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಶಿರಸ್ತೇದಾರ ರಾಜಶ್ರೀ ಭರಮಪ್ಪಗೋಳ ಅವರು ಆಧಾರ ಕಾರ್ಡ್‌ ಅರ್ಜಿಗಳಿಗೆ ದಿನಾಂಕ ಹಾಕಿಕೊಡುತ್ತಿಲ್ಲ. ಸಾರ್ವಜನಿಕರ ಕೆಲಸಗಳನ್ನು ಸರಿಯಾಗಿ ಮಾಡಿ ಕೊಡುತ್ತಿಲ್ಲವೆಂದು ಆರೋಪಿಸಿದರು.
ಯಲ್ಲಪ್ಪಾ ವಕ್ಕುಂದ, ದರನೇಂದ್ರ ಗಾಡಣ್ಣವರ, ಮಲ್ಲಪ್ಪಾ ಕಲಭಾವಿ ಲಕ್ಷ್ಮಣ ಕುರಬೆಟ್ಟ, ಸೋಮು ಗುಮ್ಮಗೋಳ, ಬಸವರಾಜ ರಟ್ಟೇದ ಹಾಗೂ ನೂರಾರು ಅರ್ಜಿದಾರರು ಇದ್ದರು.

loading...