ಭಟ್ಕಳ ತಾಲೂಕ ಶಿರಾಲಿಯ ಅಭಿವೃದ್ದಿಗೆ ಕಂಟಕವಾದ ಜಿಲ್ಲಾಡಳಿತ

0
29
loading...

ಕನ್ನಡಮ್ಮ ಸುದ್ದಿ-ಭಟ್ಕಳ: ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲಿಕರಣದ ಸಂಬಂದ ಹಲವಾರು ದಿನಗಳಿಂದ ಸಾರ್ವಜನಿಕರು 45 ಮೀಟರ್‌ ಅಗಲಿಕರಣವಾಗಬೇಕು ಎಂದು ಬೇಡಿಕೆಯನ್ನಿಟ್ಟುಕೊಂಡು ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದ್ದರು ಆದರೆ ಜಿಲ್ಲಾಡಳಿತದ ನಿರ್ಲಕ್ಷದ ಪರಿಣಾಮವಾಗಿ ಹೆದ್ದಾರಿ ಪ್ರಾಧಿಕಾರವು ಶಿರಾಲಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಕೆವಲ 30 ಮೀಟರ್‌ ಅಗಲಿಕರಣಕ್ಕೆ ಮುಂದಾಗಿದೆ ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಶಿರಾಲಿ ಪಂಚಾಯತಗೆ ಘೇರಾವ್‌ ಹಾಕಿದ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಅಗಲಿಕರಣದ ಸಂಬಂದ, ತಾಲೂಕಿನಾಧ್ಯಂತ ಸಾರ್ವಜನಿಕರಿಗೆ ಒಂದಲ್ಲಾ ಒಂದು ಸಮಸ್ಯೆಯು ತಲೆದೂರುತ್ತಿದೆ. ಈ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತದ ಗಮನಕ್ಕೆ ತಂದರು ಸಹ ಜಿಲ್ಲಾಡಳಿತ ಯಾವುದೆ ಕ್ರಮವನ್ನು ಕೈಗೊಳ್ಳದೆ ನಿರ್ಲಕ್ಷದೊರಣೆಯನ್ನು ತೊರುತ್ತಿದೆ.
ಜನರ ಸಮಸ್ಯೆಗೆ ಸ್ಪಂದಿಸುವ ಮಾತನ್ನುಕೊಟ್ಟು ಅಧಿಕಾರವನ್ನು ಹಿಡಿದ ಜನಪ್ರತಿನಿದಿಗಳು ಈ ತರಹದ ಬೆಜವಾಬ್ದಾರಿತನವನ್ನು ತೋರಿಸಿದರೆ ಸಾಮಾನ್ಯ ಸಾರ್ವಜನಿಕರ ಪಾಡೆನು ಎನ್ನುವುದೆ ದೊಡ್ಡ ಪ್ರಶ್ನೇಯಾಗಿದೆ ಪಂಚಾಯತಗೆ ಸಾರ್ವಜನಿಕರು ಘೇರಾವ್‌ ಹಾಕಿದ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಸ್ಥಳಕ್ಕೆ ಪ್ರಭಾರೆ ತಹಶಿಲ್ದಾರರನ್ನು ಕಳುಹಿಸಿದರು ಈ ಬಗ್ಗೆ ಪರಿಶಿಲಿಸಿದ ತಹಶಿಲ್ದಾರರು ಸಾರ್ವಜನಿಕರಲ್ಲಿ ಒಂದು ದಿನದ ಸಮಯವನ್ನು ಕೇಳಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವ ಭರವಸೆಯನ್ನು ನಿಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಒಕ್ಕೊರಲಿನಿಂದ ಒಮ್ಮತವನ್ನು ನಿಡಿದರು ಹಾಗು ಒಂದು ವೇಳೆ ಒಂದು ದಿನದ ನಂತರವು ಶಿರಾಲಿಯ ಈ ರಸ್ತೆ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ರಸ್ತೆಗಿಳಿದು ರಸ್ತೆ ತಡೆನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂಬ ಒಮ್ಮತದ ನಿರ್ದಾರವನ್ನು ಮಾಡಿದ್ದಾರೆ ಇದಕ್ಕೆ ಸಂಬಂದಿಸಿದ ಜಿಲ್ಲಾಧಿಕಾರಿ ಇನ್ನು ಮುಂದಾದರು ಸಮಸ್ಯೆಯನ್ನು ಗಂಬಿರವಾಗಿ ಪರಿಗಣಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೊ ಎಂದು ಕಾದು ನೋಡಬೇಕಾಗಿದೆ.

loading...