ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ನ್ಯಾ.ಶಿರೂರು

0
27
loading...

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಮಕ್ಕಳಿಗೆ ಸಂಸ್ಕಾರ ಜೋತೆಯಲ್ಲಿ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಮುಂದೆ ಬರುವಂತೆ ಹಿರಿಯ ನ್ಯಾಯವಾದಿ ಬಿ.ಎಂ.ಶಿರೂರು ಸಲಹೆ ನೀಡಿದರು.
ಪಟ್ಟಣದ ಅನ್ನಪೂರ್ಣಮ್ಮ ಸಂಗಪ್ಪ ಟೆಂಗಿನಕಾಯಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಂಜೆ ನಡೆದ 13ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬಹುಮಾನವನ್ನು ವಿತರಿಸಿ ಮಾತನಾಡುತ್ತಿದ್ದ ಅವರು,ಮಕ್ಕಳಿಗೆ ಸರಿಯಾದ ಶಿಕ್ಷಣ ಮತ್ತು ಸಂಸ್ಕಾರ ಇಲ್ಲದಿರುವದರಿಂದ ಯುವಕರು ಇವತ್ತು ಅಡ್ಡದಾರಿ ಹಿಡಿಯುವಂತಾ ಕೆಲಸ ಮಾಡುತ್ತಿದ್ದರಿಂದ ಅವರಿಗೆ ತಂದೆ ತಾಯಿಗಳು ಉತ್ತಮ ಸಂಬಂಧ ಹಾಗೂ ಸಂಸ್ಕಾರ,ಶಿಕ್ಷಣ ನೀಡುವಂತಾ ಕೆಲಸಕ್ಕೆ ಮುಂದಾಗಬೇಕು.
ಮಕ್ಕಳಿಗೆ ನಾವು ಮೊದಲು ಸಂಸ್ಕಾರದ ಅರಿವು ಮೂಡಿಸಬೇಕು.ಅವರಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಕೊಡಿಸುವಲ್ಲಿ ಪಾಲಕರು ಮುಂದಾಗಬೇಕಿದೆ.ಸದಾ ಇನ್ನಿತರರಿಗೆ ಒಳಿತನ್ನು ಬಯಸಿ,ಸದಾ ಒಳ್ಳೆಯತನ ಹೊಂದಿ,ದಯ,ಸಹಾನುಭೂತಿ,ಅನುಕಂಪ,ಸಹಕಾರ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು.ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಂಡು,ಸಮಾಜದ ಋಣ ತೀರಿಸುವ ಹೋಣೆಗಾರಿಕೆಯನ್ನು ಬೆಳಸಿಕೊಳ್ಳುವದು ಅವಶ್ಯವಾಗಿದೆ.ನಮ್ಮ ಸಾಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಿ ಪೀಳಿಗೆಯಿಂದ ಪಿಳಿಗೆಗೆ ಪಸರಿಸುವ ಜವಾಬ್ದಾರಿಯನ್ನು ಯುವಕರು ಅರಿಯಬೇಕಾಗಿದೆ ಎಂದರು.
ಯಲಬುರ್ಗಾ ಸಿಆರ್‌ಸಿಯ ದಾವಲಸಾಬ ಮದರಿ ಮಾತನಾಡಿ,ಮಕ್ಕಳ ಸರ್ವಾಂಗೀಣಾಭಿವೃದ್ದಿಗಾಗಿ ಅವರ ಶೈಕ್ಷಣಿಕ ಪ್ರಗತಿಗಾಗಿ ಪಾಲಕ ಹಾಗೂ ಶಿಕ್ಷಕರ ಪಾತ್ರ ಬಹಳ ಅತ್ಯಗತ್ಯವಾಗಿದೆ.ಶಿಕ್ಷಣದಿಂದ ಎಲ್ಲವು ಸಾಧಿಸಿಬಹುದು.ಶಿಕ್ಷಣ ಇಲ್ಲದಿದ್ದರೆ ಏನು ಸಾಧಿಸುವುದಾಗುವುದಿಲ್ಲ.ವಿದ್ಯಾರ್ಥಿಗಳು ವಿಶೇಷ ಕಾಳಜಿ ವಹಿಸಿ ಸಮಯ ಪ್ರಜ್ಞೆಯಿಂದ ಕಲಿಯಬೇಕು.ಶಿಕ್ಷಣ ಎಲ್ಲರಿಗೂ ಸಿಗಬೇಕು.ವಿದ್ಯಾರ್ಥಿಗಳು ಹೆಚ್ಚಾಗಿ ಟಿವಿಗಳ ಕಡೆ ಗಮನ ಹರಿಸದೆ,ಓದುವಿನ ಕಡೆ ಹೆಚ್ಚು ಹೆಚ್ಚಾಗಿ ಗಮನ ಹರಿಸುವ ಮೂಲಕ ಉತ್ತಮ ವಿದ್ಯಾರ್ಥಿಗಳಾಗಿ ಉತ್ತಿರ್ಣವಾಗುವಂತೆ ಸಲಹೆ ನೀಡಿದರು.
ಇದಕ್ಕೂ ಮೊದ್ಲು ಕಾರ್ಯಕ್ರಮ ಅನ್ನಪೂರ್ಣಮ್ಮ ಸಂಗಪ್ಪ ಟೆಂಗಿನಕಾಯಿ ಉದ್ಘಾಟಸಿದರು.ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.ಸಮಾರಂಭದಲ್ಲಿ
ಸಂಸ್ಥೆಯ ಅಧ್ಯಕ್ಷ ಸಂಗಣ್ಣ ಟೆಂಗಿನಕಾಯಿ.ಪಪಂ ಸದಸ್ಯ ವಿಜಯಕುಮಾರ ಕರಂಡಿ,ಅಂದಾನಗೌಡ ಉಳ್ಳಾಗಡ್ಡಿ,ಡಾ,ಶರಣಪ್ಪ ಕೊಪ್ಪಳ,ಸಂಗಪ್ಪ ಕರಂಡಿ,ವೀರನಗೌಡ ಮೇಟಿ,ಜಿ.ಪಿ.ಶೆಟ್ಟರ,ಸಂಗಪ್ಪ ರಾಮತಾಳ,ಕೆ.ಜಿ.ಪಲ್ಲೇದ,ಶರಣಗೌಡ ಓಜನಹಳ್ಳಿ,ಫಕ್ಕೀರಪ್ಪ ಕಜ್ಜಿ,ಈರಪ್ಪ ಚಾಕ್ರಿ,ಬಸವರಾಜ ಅಧಿಕಾರಿ,ಅಯ್ಯನಗೌಡ ಶಿಲವಂತರ,ಷಣ್ಮುಖಪ್ಪ ರಾಂಪೂರು, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಕೆ.ಎನ್‌.ಜನಾದ್ರಿ ನಿರೂಪಿಸಿದರು.ಮುಖ್ಯ ಶಿಕ್ಷಕ ರಾಜಾಸಾಬ ದಪೇದರ ಸ್ವಾಗತಿಸಿ,ವಂದಿಸಿದರು.

loading...