ಮಕ್ಕಳು ಸ್ಪಷ್ಟವಾದ ಗುರಿಯನ್ನು ಹೊಂದಿ

0
18
loading...

ರಬಕವಿ-ಬನಹಟ್ಟಿ: ಮಕ್ಕಳು ಈಗಿನಿಂದಲೇ ಉತ್ತಮ ಗುರಿಯನ್ನು ಇಟ್ಟುಕೊಂಡು ಅದಕ್ಕೆ ತಕ್ಕ ಪರಿಶ್ರಮ ವಹಿಸಿದರೆ ಫಲ ಸಿಕ್ಕೆ ಸಿಗುತ್ತದೆ ಎಂದು ಜಗದಾಳ ಗ್ರಾಮದ ಸರಕಾರಿ ಪ್ರೌಡ ಶಾಲೆಯ ಇಂಗ್ಲೀಷ ಉಪನ್ಯಾಸಕ ಬಿ. ಎಲ್. ಜಂಬಗಿ ಹೇಳಿದರು.
ಅವರು ನಗರದ ಕೆಎಚ್‍ಡಿಸಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ವರ್ಗದ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮತ್ತೋರ್ವ ಅತಿಥಿ ಯಲ್ಲಟ್ಟಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆ ಬಿ. ಡಿ. ಗೌಡರ ಮಾತನಾಡಿ, ಶಾಲೆಯಲ್ಲಿ ಉತ್ತಮ ಪರಿಸರವನ್ನು ರೂಪಿಸಿಕೊಂಡಿದ್ದೀರಿ. ಮುಂದೇಯೂ ಇನ್ನೂ ಹೆಚ್ಚಿನ ರೀತಿಯಲ್ಲಿ ನಿಮ್ಮ ಪರಿಸರವನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದರು.
ಶಾಲೆಯಲ್ಲಿ ದೀಪದಾನ ಕಾರ್ಯಕ್ರಮವನ್ನು ನೆರವೆರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಶಾಲೆಯ ಶಿಕ್ಷಕರಾದ ಜೆ. ಎಸ್. ಕಟ್ಟಿಮನಿ, ಶೈಲಾ ಮಿರ್ಜಿ, ಹೇಮಾ ಜೀರಂಕಲಗಿ, ಬಿ. ತೆಗ್ಗಿ, ಪಿ. ವಾಯ್. ಕರಡಿ, ಎಸ್. ಬಿ. ಗೊಲಬಾಂವಿ ಮಾತನಾಡಿದರು. ಮುಖ್ಯ ಗುರುಗಳಾದ ಬಿ. ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಎಸ್‍ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಸ್ವಾತಿ ಖಟಾವಕರ ಸ್ವಾಗತಿಸಿದರು. ಕಾವ್ಯಾ ಖಟಾವಕರ ನಿರೂಪಿಸಿದರು ಕೊನೆಗೆ ಪ್ರೀತಿ ಅವಟಿ ವಂದಿಸಿದರು.

loading...