ಮಕ್ಕಳ ಪ್ರತಿಭೆಗಳನ್ನು ಗುರುತಿಸಿ: ಚವ್ಹಾಣ

0
19
loading...

ಕನ್ನಡಮ್ಮ ಸುದ್ದಿ-ಧಾರವಾಡ: ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು” ಎಂಬಂತೆ ಸಣ್ಣ ಸಣ್ಣ ಮಕ್ಕಳಿಗೆ ಮೂರು ದಿನದಲ್ಲಿ ಸಾಹಿತ್ಯ, ಸಂಗೀತ, ನಟನೆ, ನೃತ್ಯ ತರಬೇತಿ ನೀಡಿ ವೇದಿಕೆಯಲ್ಲಿ ಪ್ರದರ್ಶಿಸುವ ಕಾರ್ಯ ಶ್ಲಾಘನೀಯ ಎಂದು ಕಲಾವಿದ ಪ್ರಭು ಕುಂದರಗಿ ಹೇಳಿದರು. ಶ್ರೀಗುರು ಗೋರಕ್ಷನಾಥ ಪ್ರಾಥಮಿಕ ಶಾಲೆ ಸಮುದಾಯ ಭವನದಲ್ಲಿ ಸಾಂಸ್ಕೃತಿಕ ಲೋಕ ಆರ್ಟ್‌ ಮತ್ತು ಕಲ್ಚರಲ್‌ ಅಕಾಡೆಮಿ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ “ಚಿಣ್ಣರ ಸಾಂಸ್ಕೃತಿಕ ಮೇಳ-2018” ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಜಿ ಮಹಾಪೌರ ಡಿ. ಕೆ. ಚವ್ಹಾಣ ಮಾತನಾಡಿ, ವಾಯ್.ಡಿ. ಮಧೂರಕರ ಬಡ ಮಕ್ಕಳಿಗಾಗಿಯೂ ವಿದ್ಯಾರ್ಥಿ ವಸತಿ ನೆಲೆ ಸ್ಥಾಪಿಸಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ದೈಹಿಕವಾಗಿ ಬೆಳೆಸುವ ಕಾರ್ಯ ಬಹಳ ಶ್ರೇಷ್ಟವಾದ ಕಾರ್ಯವಿದು ಎಂದರು.ಪಬ್ಬಜ್ಯೋರವಿತಿವಿಜ್ಯಾಮುನಿಯೂ ಸಾನಿಧ್ಯವಹಿಸಿ ಮಾತನಾಡಿ, ಮಕ್ಕಳಲ್ಲಿ ಮೊದಲು ಶಿಸ್ತುಪಾಲನೆ ಮುಖ್ಯ ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಸಂಸ್ಥೆ ಮುಂದಾಗಬೇಕು ಎಂದರು.ಡಿ.ಪಿ. ಮಧೂರಕರ ಅಧ್ಯಕ್ಷತೆವಹಿಸಿದ್ದರು.ಮಲ್ಲೇಶಪ್ಪ ಅರಳಿಕಟ್ಟಿ, ಅಶೋಕ ಮ್ಯಾಗೇರಿ, ಈರಪ್ಪ ಮಾಳಣ್ಣವರ, ವಿಜಯಕುಮಾರ ಬಸಪ್ಪ ಉಣಕಲ, ಶಿವಾನಂದ ಅಮರಶೆಟ್ಟಿ, ಬಸವರಾಜ ಯರಿಹಕ್ಕಲ ಉಪಸ್ಥಿತರಿದ್ದರು.
ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಸಯ್ಯದ್‌ ಎ.ಎಂ. ಪ್ರಾಸ್ತಾವಿಕ ಮಾತನಾಡಿದರು. ಪ್ರಶಾಂತ ಸ್ವಾಗತಿಸಿದರು. ಪ್ರವೀಣ ವಂದಿಸಿದರು, ಇದೇ ಸಂದರ್ಭದಲ್ಲಿ ಮಧೂರಕರ ದಂಪತಿಗಳಿಗೆ ಸನ್ಮಾನಿಸಲಾಯಿತು. ಹಿರಿಯ ಕಲಾವಿದರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ವೈವಿದ್ಯಮ0iÀು ಕಾರ್ಯಕ್ರಮ ಜರುಗಿದವು.

loading...