ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡಬೇಕು: ಶಾಸಕಿ ಶಾರದಾ

0
17
loading...

ಕನ್ನಡಮ್ಮ ಸುದ್ದಿ-ಕುಮಟಾ: ಗಾಣಿಗ ಸಮುದಾಯದವರು ಆರ್ಥೀಕ ದುರ್ಬಲತೆ ಕಡಿಮೆ ಇದ್ದರೂ ಶೈಕ್ಷಣಿಕವಾಗಿ, ಸಾಮಾಜಿಕ ಸೇವೆಗಳಲ್ಲಿ ಹಿಂದೆ ಇದ್ದಾರೆ. ಸಣ್ಣ ಸಮಾಜದಲ್ಲಿ ಏಕತೆ, ಒಗ್ಗಟ್ಟಿನಿಂದ ನಮ್ಮ ಅಭಿವೃದ್ದಿ ಕಾಣುವ ಜತೆಗೆ ನಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾಸಕಿ ಶಾರದಾ ಮೋಹನ ಶೆಟ್ಟಿ ಹೇಳಿದರು.
ಅವರು ರವಿವಾರ ಕುಮಟಾದಲ್ಲಿ ಉ ಕ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ಹಿಂದೆ ಹಿರಿಯರಾದ ಎನ್‌ ಜಿ ಶೆಟ್ಟರು ಸಮಾಜಕ್ಕೆ ಮಾರ್ಗದರ್ಶಕರಾಗಿ ಸಮಾಜ ಬೆಳೆಸಲು ಕಾರಣರಾದರು. ಕುಮಟಾ ಕ್ಷೇತ್ರದ ಜನರ ನಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಗೌರವದಿಂದ ಕಂಡು ಅವರ ಬೇಡಿಕೆ ಈಡೇರಿಸಲು ಮುಂದಾಗಿದ್ದೇವೆ. ಮಾಜಿ ಶಾಸಕ ದಿ ಮೋಹನ ಶೆಟ್ಟರು ತೋರಿದ ದಾರಿಯಲ್ಲೇ ಸಾಗಿ ಕುಮಟಾ-ಹೊನ್ನಾವರಕ್ಷೇತ್ರ ಎಲ್ಲ ಸಮುದಾಯದ ಕಲ್ಯಾಣಕ್ಕೆ ಶ್ರಮಿಸಿದ್ದೇವೆ. ಪ್ರತಿ ಭಾಗದಲ್ಲೂ ಅಭಿವೃದ್ದಿ ಮಾಡಿದ್ದೇವೆ. ದತ್ತಿನಿಧಿ ಯೋಜನೆಗೆ ಮಾವ ದಿ ಕೆ ವಿ ಶೆಟ್ಟರು ಹಾಗೂ ಪತಿ ದಿ ಮೋಹನ ಶೆಟ್ಟರ ಹೆಸರಲ್ಲಿ ತಲಾ 1 ಲಕ್ಷರೂ ನೀಡುತ್ತೇವೆ ಎಂದರು.
ನಾವು ಮಕ್ಳಳಿಗೆ ಶಿಕ್ಷಣ ನೀಡಿ ಅವರನ್ನೇ ಆಸ್ತಿಯಾಗಿಸಬೇಕು. ಎಲ್ಲ ಸಮುದಾಯದವರ ಜತೆಗೂ ಬಹಳ ಪ್ರೀತಿ ಹಾಗೂ ವಿಶ್ವಾಸಗಳಿಸಿ ಶಾರದಾ ಶೆಟ್ಟಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಯುವಕ-ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದರಾಗಬೇಕು. ಸಮಾಜದ ಹಿರಿಯರಾದ ಸಮಾಜಮುಖಿ ಎಸ್‌ ಪಿ ಶೆಟ್ಟಿ ಅವರ ಹೆಸರಲ್ಲಿಅಭಿನಂದನಾ ಗ್ರಂಥ ಮಾಡಬೇಕು. ತಾವು 1 ಲಕ್ಷ ರೂ ದತ್ತಿನಿಧಿಗೆ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಸೀತಾರಾಮ ಬಲಿಮನೆ, ಕಲ್ಯಾಣಿ ಶೆಟ್ಟಿ ಕುಮಟಾ, ಕಲ್ಯಾಣಿ ಶೆಟ್ಟಿ ಹೊನ್ನಾವರ ಇವರನ್ನು ಗೌರವಿಸಲಾಯಿತು.
ಶ್ರದ್ದಾ ಶೆಟ್ಟಿ ಹಾಗೂ ಶ್ರೇಯಾ ಶೆಟ್ಟಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಜಿ ಎಸ್‌ ಶೆಟ್ಟಿ ಸ್ವಾಗತಿಸಿದರು. ಸಹಕಾರ್ಯದರ್ಶಿ ಆರ್‌ ಬಿ ಶೆಟ್ಟಿ ನಿರೂಪಿಸಿದರು. ಉಪಾಧ್ಯಕ್ಷ ಕೆ ಆರ್‌ ಶೆಟ್ಟಿ ವಂದಿಸಿದರು. ಶಿರಸಿ ಅಧ್ಯಕ್ಷ ಚಂದ್ರು ಶೆಟ್ಟಿ. ಕಾರ್ಯದರ್ಶಿ ಆರ್‌ ಪಿ ಶೆಟ್ಟಿ ಜಿಲ್ಲೆಯ ಎಲ್ಲ ಭಾಗದಿಂದ ಸಮಾಜ ಭಾಂದವರು ಆಗಮಿಸಿದ್ದರು.

loading...