ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ

0
28
loading...

ಮುಂಡಗೋಡ: ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿದ ಘಟನೆ ತಾಲೂಕಿನ ಕಾಳಗನಕೊಪ್ಪದಲ್ಲಿ ಬುಧವಾರ ಸಂಜೆ ನಡೆದಿದೆ. ಅನುಸೂಯಾ ರವಿ ಬೆಳವಟ್ಟಿ ಎಂಬುವವರಿಗೆ ಸೇರಿದ ಮನೆಯೇ ಸುಟ್ಟು ಹಾನಿಗೊಳಗಾಗಿದ್ದು, ಬುಧವಾರ ಸಂಜೆ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ ಹೋಗಿದ್ದ ವೇಳೆ ಆಕಸ್ಮಿಕವಾಗಿ ಮನೆಗೆ ಬೆಂಕಿ ಹತ್ತಿಕೊಂಡಿದೆ. ಅಕ್ಕಪಕ್ಕದವರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಿ ಮನೆಯ ಬಹುತೇಕ ಬಾಗ ಸುಟ್ಟು ಕರಕಲಾಗಿತ್ತು. ಮನೆಯಲ್ಲಿದ್ದ ಬಟ್ಟೆ, ಗೃಹಉಪಯೋಗಿ ವಸ್ತುಗಳು ಸೇರಿದಂತೆ ಬಟ್ಟೆಯಲ್ಲಿ 10,000 ರೂ. ಇಟ್ಟಿದ್ದು ಅದು ಸಹ ಬೆಂಕಿಗಾಹುತಿಯಾಗಿವೆ. ಅಕ್ಕ ಪಕ್ಕದ ಮನೆಗೆ ಹೊತ್ತಿಕೊಳ್ಳವ ಬೆಂಕಿಯನ್ನು ಅಷ್ಟಕ್ಕೆ ತಡೆಯುವಲ್ಲಿ ಮನೆಯವರು ಮತ್ತು ಗ್ರಾಮಸ್ಥರು ಯಶಸ್ವಿಯಾಗಿದ್ದಾರೆ. ಬೆಂಕಿಯಿಂದ ಸುಮಾರು 80.000 ರೂ. ಹಾನಿಯಾಗಿದೆ ಎಂದು ಮನೆ ಮಾಲಿಕಿ ಅನುಸೂಯಾ ಗುರುವಾರ ಮುಂಡಗೋಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದ್ದಾರೆ.

loading...