ಮಹದಾಯಿ ಅನುಷ್ಠಾನಕ್ಕೆ ಆಗ್ರಹಿಸಿ ಕರವೇ ಪಾದಯಾತ್ರೆ

0
10
loading...

ಕನ್ನಡಮ್ಮ ಸುದ್ದಿ-ನರಗುಂದ: ಮಹದಾಯಿ ಕಳಸಾ ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿ ಕರವೇ ತಾಲೂಕ ಘಟಕದ ಸದಸ್ಯರು ಹಾಗೂ ರೈತ ಮುಖಂಡರು ಮಾ. 27 ರಂದು ತಾಲೂಕಿನ ರಡ್ಡೇರನಾಗನೂರ ಗ್ರಾಮದಿಂದ ಹಮ್ಮಿಕೊಂಡ ಪಾದಯಾತ್ರೆಯು ನರಗುಂದ ಪಟ್ಟಣಕ್ಕೆ ಬುಧವಾರ ಆಗಮಿಸಿತು.
ಪಟ್ಟಣದಲ್ಲಿ ಮೆರವಣಿಗೆ ಹೊರಡಿಸಿದ ರೈತರು ಕಳೆದ 988 ದಿನಗಳಿಂದ ನಡೆಸುತ್ತಿರುವ ರೈತರ ಧರಣಿಯಲ್ಲಿ ಭಾಗಿಗಳಾದರು.
ಈ ಸಂದರ್ಭದಲ್ಲಿ ಕರವೇ ತಾಲೂಕ ಘಟಕದ ಅಧ್ಯಕ್ಷ ಎಚ್‌.ಎಚ್‌. ಮಜ್ಜಿಗುಡ್ಡ, ರಮೇಶ ನಾಯ್ಕರ್‌, ಎಸ್‌.ಬಿ. ಜೋಗಣ್ಣವರ ಹಾಗೂ ಅನೇಕ ರೈತ ಮುಖಂಡರು ಮತನಾಡಿ, ಮಹದಾಯಿ ಅನುಷ್ಟಾನ ಸರ್ಕಾರಗಳು ಕೈಗೊಳ್ಳುವವರೆಗೂ ಧರಣಿ ಮುಂದುವರೆಯಲಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದನಗೌಡ ಮರಿಗೌಡ್ರ, ದೇವಕ್ಕ ತಾಳಿ, ಬಸವ್ವ ಚೆಲುವಣ್ಣವರ, ದೇವಕ್ಕ ಚೆಲುವಣ್ಣವರ, ಪಾರವ್ವ ಅಬ್ಬಿಗೇರಿ, ಚನ್ನಪ್ಪಗೌಡ ಪಾಟೀಲ, ವೀರಣ್ಣ ಸೊಪ್ಪಿನ, ಮೃತ್ಯುಂಜಯ ಹಿರೇಮಠ, ಶಾಂತವ್ವ ಪೂಜಾರ, ಪಕ್ಕೀರಪ್ಪ ಮಾದರ, ಚಂದ್ರಗೌಡ ಪಾಟೀಲ, ಯಲ್ಲಪ್ಪ ಮಾದರ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.

loading...