ಮಹಾವೀರ ಜಯಂತಿ ಅಂಗವಾಗಿ ಭವ್ಯ ಮೆರವಣಿಗೆ

0
17
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಮನುಷ್ಯನ ದುರಾಸೆಯಿಂದಲೇ ಇಂದು ಅಳಿವಿನಂಚಿಗೆ ತಲುಪಿದ ಜಗತ್ತನ್ನು ರಕ್ಷಿಸಿಸಲು ಭಗವಾನ ಮಹಾವೀರರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ರಾಷ್ಟ್ರ ಪ್ರಶಸ್ತಿ ವಿಜೇತ ಎಸ್‌.ಬಿ.ಮುನ್ನೂಳ್ಳಿ ಹೇಳಿದರು.
ಅವರು ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಗುರುವಾರ ಶ್ರೀ ಮಹಾವೀರ ಯುವಕ ಸಂಘದ ಆಶ್ರಯದಲ್ಲಿ ಜರುಗಿದ ಶ್ರೀ 1008 ಭಗವಾನ್‌ ಮಹಾವೀರರ 2616 ನೇ ಜಯಂತಿ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿ, ತನ್ನ ಸ್ವಾರ್ಥಕ್ಕಾಗಿ ಪರಿಸರ ಮಲೀನಗೊಳಿಸುತ್ತಿರುವದ ದುರದೃಷ್ಠಕರ. ಸಮಾಜ ಮತ್ತು ಧರ್ಮ ಸುಧಾರಣೆ ಕಾಲದಿಂದ ಕಾಲಕ್ಕೆ ನಡೆಯುತ್ತಲೆ ಇದೆ. ಸಮಾಜದಲ್ಲಿ ಹಲವಾರು ಮಹಾತ್ಮರು ತಮ್ಮ ಉಪದೇಶದಿಂದ ಈ ರಾಷ್ಟ್ರವನ್ನು ಪಾವನಗೊಳಿಸಿದ್ದಾರೆ. ಭಗವಾನ್‌ ಮಹಾವೀರರು ಅಹಿಂಸೆಯ ತ್ಯಾಗ ಮೂಲವಾದ ಸಂಪ್ರದಾಯಕ್ಕೆ ಸ್ಪಷ್ಠ ನಿಲುವು ಸಮಕಾಲಿನ ವಿಚಾರಗಳನ್ನು ಅಳವಡಿಸುವದರ ಮೂಲಕ ಜನ ಸಾಮಾನ್ಯರನ್ನು ಜೈನ ಧರ್ಮಕ್ಕೆ ಆಕರ್ಷಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ತತ್ವ, ತ್ಯಾಗದ ಮಹಿಮೆಯನ್ನು ಭೋದಿಸಿದ ಅಂಥವರ ಜೀವನ ಆದರ್ಶಮಯವಾಗಿದೆ ಎಂದರು.
ನಿವೃತ್ತ ಶಿಕ್ಷಕ ಪಿ.ಎನ್‌. ಹಣ್ಣಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೈನ ಸಮಾಜ ಸಂಸ್ಕ್ರತಿ, ಸಂಸ್ಕಾರಕ್ಕೆ ಹೆಸರುವಾಸಿಯಾಗಿದ್ದು ಪಾಲಕರು ಮಕ್ಕಳಿಗೆ ಉತ್ತಮ ನಡೆ ನುಡಿ ಕಲಿಸಿ ಸಾಧಕರನ್ನಾಗಿ ರೂಪಿಸಿದಾಗ ಮಾತ್ರ ಜೀವನ ಸಾರ್ಥಕವಾಗಲಿದ್ದು ಯುವಕರು ದುಶ್ಚಟಗಳನ್ನು ತೊರೆದು ಅಧ್ಯಾತ್ಮದತ್ತ ಒಲವು ತೋರಬೇಕೆಂದರಲ್ಲದೇ ಹಿರಿಯರ ಮಾರ್ಗದರ್ಶನ ಪಡೆಯಬೇಕು. ಉನ್ನತ ಹುದ್ದೆಗಳನ್ನು ಹೊಂದಿ ಈ ಸಮಾಜಕ್ಕೆ ಮತ್ತಷ್ಟು ಕೀರ್ತಿ ಬರುವಂತೆ ಪ್ರಯತ್ನಿಸಬೇಕು. ಮಹಾವೀರ ಯುವಕ ಸಂಘದ ಕಾರ್ಯ ಶ್ಲಾಘಣೀಯ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎಮ. ರಾಜನ್ನವರ, ಜಿಪಂ ಸದಸ್ಯ ಅನೀಲ ಮೆಕಲಮರ್ಡಿ, ಯುವಕ ಸಂಘದ ಅಧ್ಯಕ್ಷ ಅನೂಪ ಇಂಚಲ, ಉಪಾಧ್ಯಕ್ಷ ಲಾಲಚಂದ ಗುಗಡ, ಜೈ ಕರ್ನಾಟಕ ಯುವಕ ಸಂಘಟಣೆಯ ಅಧ್ಯಕ್ಷ ಸಹಜಾನಂದ ಬೋಗಾರ, ಅಜಿತ ರಾಜನ್ನವರ, ಧೀರಜ ರಾವನ್ನವರ, ವಿನೋದ ಹಣೀಕೇರಿ, ಪ್ರವೀನ ರಂಗೋಳ್ಳಿ, ಅಜೀತ ಮುತ್ತೆನ್ನವರ, ಬಾಹುಬಲಿ ಬೊಗಾರ, ಶ್ರೈಣಿಕ ಬಸ್ತವಾಡ, ಬಾಹುಬಲಿ ಹಣಬರಟ್ಟಿ, ಸುರೇಂದ್ರ ಕಲಘಟಗಿ, ಪದ್ಮರಾಜ ದಿಬ್ಬದ, ಶ್ರಾವಕ, ಶ್ರಾವಕಿಯರು ಇದ್ದರು. ಸುದರ್ಶನ ಉಪಾಧ್ಯೆ ಸ್ವಾಗತಿಸಿದರು. ಬಸವರಾಜ ದೋತರದ ನಿರೂಪಿಸಿದರು.

loading...