ಮಹಿಳಾ ದಿನಾಚಾರಣೆ ನಿಮಿತ್ತ ಬೃಹತ್ ಕಾಲ್ನಡಿಗೆ ರ್ಯಾಲಿ

0
27
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಜಸ್ಟೀಸ್ ಯ್ಯಾಂಡ್ ಕೇರ್. ಆಪರೇಶನ್ ಅಲರ್ಟ ಸಂಯೋಗದೊಂದಿಗೆ ಸಾರ್ವಜನಿಕರಲ್ಲಿ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹಾಗೂ ಮಹಿಳೆರ ಸುರಕ್ಷೆತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಬೃಹತ್ ಕಾಲ್ನಡಿಗೆ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟಕರಾಗಿ ಜಿಲ್ಲಾ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರ್ಯಾಲಿಗೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಮಹಿಳೆಯರು ಸಹ ಯಾರಿಗೇನು ಕಡಿಮೆ ಇಲ್ಲ ಎಲ್ಲ ರಂಗದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಹ ಪುರಷರಷ್ಟೇ ಸಮಾನರು ಎಂದು ತೊರಿಸುತ್ತಿದ್ದಾರೆ. ಮಹಿಳೆರು ಮಿಸಲಾತಿಗೆ ಹೋರಾಟ ಮಾಡುವುದನ್ನು ನಿಲ್ಲಿಸಬೇಕು ಕಾರಣ ಸ್ಪರ್ಧಾ ಜಗತ್ತಿನಲ್ಲಿ ಸ್ಪರ್ಧೆಯನ್ನು ಎದುರಿಸುವ ಶಕ್ತಿ ಹೊಂದಿದ್ದಿರಾ ಎಂದು ಹೇಳಿದರು.
ಬೃಹತ ಕಾಲ್ನಡಿಗೆ ರ್ಯಾಲಿಯು ಡಿಸಿ ಕಚೇರಿಯಿಂದ ಚನ್ನಮ್ಮ ಸರ್ಕಲ್, ಮಾರುತಿಗಲ್ಲಿ, ಹುತಾತ್ಮ ಚೌಕ್, ಬೋಗಾರೆಸ್ ಮೂಲಕ ಸರ್ಧಾರ ಮೈದಾನದಲ್ಲಿ ಮುಕ್ತಾಯಗೊಂಡಿತು. ರ್ಯಾಲಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ,ಜಿಲ್ಲಾಪಂಚಾಯತ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ವಿವಿಧ ಕಾಲೇಜ್ ವಿದ್ಯಾರ್ಥಿನಿಯರು, ಮಹಿಳಾ ಸಂಘಟನೆಗಳು ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ, ಉಪ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ, ಮಹಿಳಾ ಕಲ್ಯಾಣ ಇಲಾಖೆ ಕಾರ್ಯದರ್ಶಿ ಎ.ಎಂ ಚೌಗಲೇ ಸೇರಿದಂತೆ ಅನೇಕ ಗಣ್ಯರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

loading...