ಮಹಿಳೆಯರು ಕಾನೂನಿನ ಪ್ರಯೋಜನ ಪಡೆದುಕೊಳ್ಳಬೇಕು: ನ್ಯಾ ಶ್ರೀಪಾದ

0
16
loading...

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಮಹಿಳೆಯರ ಸಾಧನೆಗೆ ಪುರುಷರು ಪ್ರೋತ್ಸಾಹವನ್ನು ನೀಡಿ ಪುರುಷ ಪ್ರಧಾನ ಸಮಾಜದ ಕಲ್ಪನೆಯನ್ನು ತೊಡೆದು ಎಲ್ಲರೂ ಸಮಾನರು ಎಂಬ ಪರಿಕಲ್ಪನೆಯನ್ನು ಹೊಂದಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ ಶ್ರೀಪಾದ ಎನ್‌ ಹೇಳಿದರು.
ಅವರು ಪಟ್ಟಣದ ಶಾರದಾಗಲ್ಲಿಯ ಶಿವಪ್ಪಾಪೂಜಾರಿ ಗ್ರಾಮೀಣ ಅಭಿವೃದ್ಧಿ ಸಂಪನ್ಮೂಲ ಕೇಂದ್ರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೋಲಿಸ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚೇತನಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯ ವಕೀಲ ಎನ್‌ .ಟಿ ಗಾಂವ್ಕರ್‌ ವಾಣಿಜ್ಯ ಉದ್ದೇಶಕ್ಕಾಗಿ ಲೈಂಗಿಕ ದೌರ್ಜನ್ಯಕ್ಕಾದ ಮಹಿಳೆಯರು ಹಾಗೂ ಮಾನವ ಕಳ್ಳ ಸಾಗಾಣಿಕೆ ಕುರಿತು ಉಪನ್ಯಾಸದಲ್ಲಿ ಮಹಿಳೆ ತನ್ನ ದೌರ್ಬಲ್ಯ ಮೆಟ್ಟಿ ಮಾನಸಿಕ ಸಧೃಢತೆ ಬೆಳೆಸಿಕೊಳ್ಳಬೇಕು ಎಂದರು. ವಕೀಲೆ ಅಮೀನ ಶೇಖ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎನ್‌.ಕೆ ಭಾಗ್ವತ್‌, ಟೀಡ್‌ ಟ್ರಸ್ಟನ ಮುಖ್ಯಸ್ಥೆ ಮೋಹಿನಿ ಪೂಜಾರಿ, ಇಎಸ್‌ಐ ನಾರಾಯಣ ರಾಠೋಡ ,ಚೇತನಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷೆ ಲಕ್ಷ್ಮಿ ಗಾವಡೆ ಉಪ್‌ಸ್ಥಿತರಿದ್ದರು,ಸಾಧನಾ ಸಂಘದ ಸದಸ್ಯರು ಪ್ರಾರ್ಥಿಸಿದರು. ಭೈರವಿ ನಾಯ್ಕ ನಿರ್ವಹಿಸಿದರು. ಶಿಕ್ಷಕ ಸುಧಾಕರ ನಾಯಕ ಸ್ವಾಗತಿಸಿದರು.ಶಾಂತಿ ಸಿದ್ದಿ ವಂದಿಸಿದರು.

loading...