ಮಹಿಳೆಯರ ಸಮಸ್ಯೆ ಹೋಗಲಾಡಿಸಲು ಸಂಜೀವಿನಿ ಯೋಜನೆ ಸಹಾಯ

0
22
loading...

ಕನ್ನಡಮ್ಮ ಸುದ್ದಿ-ಮುಂಡಗೋಡ: ಮಹಿಳೆಯರ ಸಬಲಿಕರಣಕ್ಕಾಗಿ ಸರಕಾರ ಸಂಜೀವಿನಿ (ಎನ್‌.ಆರ್‌.ಎಲ್‌.ಎಂ) ಯೋಜನೆಯನ್ನು ಜಾರಿಗೆ ತಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಸಮಾನತೆ, ತಾರತಮ್ಯ, ಕೀಳರಿಮೆ, ಮಹಿಳೆಯರ ಸಮಸ್ಯೆಗಳನ್ನು ಹೋಗಲಾಡಿಸಲು ಮಹಿಳೆಯರನ್ನು ಸಂಘಟಿಸಲು ಸರಕಾರ ಸಂಜೀವಿನಿ ಯೋಜನೆಯಡಿ ಸ್ವಸಹಾಯ ಸಂಘ ಹಾಗೂ ಒಕ್ಕೂಟಗಳನ್ನು ರಚಿಸುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಬೆಡಸಗಾಂವ ಗ್ರಾ.ಪಂ. ಅಧ್ಯಕ್ಷ ಪ್ರಕಾಶ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ, ಜಿ.ಪಂ.ಸದಸ್ಯ ರವಿಗೌಡ ಪಾಟೀಲ, ಮುಖಂಡರಾದ ಕೃಷ್ಣ ಹಿರೇಹಳ್ಳಿ, ಎಚ್‌.ಎಂ.ನಾಯ್ಕ, ವಿ.ಎಸ್‌.ನಾಯಕ, ತಾ.ಪಂ.ಸದಸ್ಯ ಜ್ಞಾನದೇವ ಗುಡಿಯಾಳ, ಯಳಿಯಪ್ಪ ನಾಯ್ಕ, ಆರ್‌.ಜಿ.ನಾಯ್ಕ, ಗುಂಜಾವತಿ ಗ್ರಾ.ಪಂ.ಅಧ್ಯಕ್ಷ ಬಸಯ್ಯ ನಡುವಿನಮನಿ, ಬೆಡಸಗಾಂವ ಗ್ರಾ.ಪಂ. ಪಿ.ಡಿ.ಓ. ಶಂಕರ ನಾಯ್ಕ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅಕ್ಷತಾ ನಾಯರ, ಉಪಾಧ್ಯಕ್ಷೆ ಕೋಮಲ ಗೌಡ, ಕಾರ್ಯದರ್ಶಿ ಶಾಂತಾ ನಾಯ್ಕ, ಖಜಾಂಚಿ ಮಾಲಿನಿ ನಾಯ್ಕ, ಉಪ ಕಾರ್ಯದರ್ಶಿ ಗೌರಿ ಭೋವಿ ಇದ್ದರು.
ಇದೇ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು ಶಾಸಕ ಶಿವರಾಮ ಹೆಬ್ಬಾರ, ಗ್ರಾ.ಪಂ.ಅಧ್ಯಕ್ಷ ಪ್ರಕಾಶ ನಾಯ್ಕ, ಪಿ.ಡಿ.ಓ. ಶಂಕರ ನಾಯ್ಕ, ತಾ.ಪಂ. ಸಂಜೀವಿನಿ ವಲಯ ಮೇಲ್ವಿಚಾರಕಿ ಶ್ಯಾಮಲಾ ನಾಯ್ಕ ಸೇರಿದಂತೆ ಕೆಲವರನ್ನು ಸನ್ಮಾನಿಸಿದರು. ಪ್ರಾರಂಭದಲ್ಲಿ ಶಾರದಾ ರಾವ್‌ ಪ್ರಾರ್ಥನಾ ಗೀತೆ ಹಾಡಿದರು. ಲತಾ ಗೌಡ ಸ್ವಾಗತಿಸಿದರು. ತಾ.ಪಂ. ಸಂಜೀವಿನಿ ವಲಯ ಮೇಲ್ವಿಚಾರಕಿ ಶ್ಯಾಮಲಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ರಾಮಣ್ಣ ಪನ್ನೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಂಗಲಾ ಮೇಲಿನಮನಿ ವಂದಿಸಿದರು.

loading...