ಮಹಿಳೆ ಅಬಲೆಯಲ್ಲ ಸಬಲೆ: ಅನಿತಾ

0
24
loading...

ಕನ್ನಡಮ್ಮ ಸುದ್ದಿ- ಧಾರವಾಡ: ಸಮಾಜದಲ್ಲಿ ಒಂದಿಷ್ಟು ಒಳ್ಳೆಯ ಮನಸ್ಸುಗಳ ಕನಸಿಗೆ ಸಿಹಿ ತುಂಬುವ ಮೂಲಕ ಮಹಿಳೆ ಅಬಲೆಯಲ್ಲ ಸಬಲೆ” ಎಂದು ಸಾಬೀತು ಮಾಡಿರುವ ಲೂಸಿ ಸಾಲ್ಡಾನರ ಬದುಕು ನಮಗೆಲ್ಲ ಮಾದರಿ” ಎಂದು ಧಾರವಾಡ ಸಬ್‌ ಜೈಲ್‌ ಸೂಪರಿಡೆಂಟ್‌ ಡಾ.ಅನಿತಾ ಅಭಿಪ್ರಾಯಪಟ್ಟರು. ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಅಪ್ನಾದೇಶ ಬಳಗದ ಜಿಲ್ಲಾ ಸಮಿತಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಹಯೋಗದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನಿವೃತ್ತ ಅಧ್ಯಾಪಕಿ ಲೂಸಿ ಸಾಲ್ಡಾನಾ ಅವರ ಆತ್ಮ ಚರಿತ್ರೆ ‘ಕಥೆಯಲ್ಲ ಜೀವನ’ ಕೃತಿ ಬಿಡುಗಡೆಯ ಸಮಾರಂಭÀ ಉದ್ಘಾಟಿಸಿ ಮಾತನಾಡಿದರು. ಮಹಿಳೆ ಅಬಲೆಯಲ್ಲ ಸಬಲೆ, ತನ್ನ ಬದುಕನ್ನು ನೋವಿನೊಡನೆ ಮಕ್ಕಳೊಡನೆ ನಲಿಯುತ್ತ ಸಾರ್ಥಕ ಪಡಿಸಿಕೊಂಡ ಲೂಸಿ ಸಾಲ್ಡಾನಾರ ಬದುಕು ಇದನ್ನು ಸಾಧಿಸಿ ತೋರಿಸಿದೆ.
ಜೀವನದಲ್ಲಿ ಘಟಿಸಿದ ಘಟನೆಗಳನ್ನು ಸಹಿಸಲಾಗದ ನೋವುಗಳನ್ನು ಮೀರಿ ಅಪಾರ ಸಾಧನೆ ಮಾಡಿದ ಅವರ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬೇರುಗಂಡಿ ಬೃಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಜೀವನದ ಅನುಭವಗಳ ಗೆಲ್ಲುವ ಸಾಮರ್ಥ್ಯವನ್ನು ತಮ್ಮ ಬದುಕಿನುದ್ದಕ್ಕೂ ಲೂಸಿ ಸಾಲ್ಡಾನಾ ಗುರುಮಾತೆ ಅನುಭವಿಸುವುದರ ಜೊತೆಗೆ ನಮ್ಮಂತಹ ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಬದುಕುವುದಕ್ಕೆ ದಾರಿದೀಪವಾಗಿರುವರು ಎಂದರೆ ತಪ್ಪಾಗಲಾರದು ಎಂದರು. ಅಪ್ನಾದೇಶ ಜಿಲ್ಲಾ ಅಧ್ಯಕ್ಷ ಜಿ.ಟಿ.ಶಿರೋಳ.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿದ್ಯಾ ನಾಡಿಗೇರ.ಭಾರತ ಜ್ಞಾನ ವಿಜ್ಞಾನ ಸಮೀತಿಯ ಜಿಲ್ಲಾ ಅಧ್ಯಕ್ಷ ಗುರು ತಿಗಡಿ.
ಬಿ.ಆರ್‌.ಸಿ. ಸಮನ್ವಯಾಧಿಕಾರಿ ಡಾ.ರೇಣುಕಾ ಅಮಲಝರಿ ಉಪಸ್ಥಿತರಿದ್ದರು. ಸುಮಂಗಳಾ ಕುಚಿನಾಡ (ಶಿಕ್ಷಣ), ಲೂಸಿ ಸಾಲ್ಡಾನಾ (ಸಮಾಜ ಸೇವೆ), ವಿದ್ಯಾ ನಾಡಗೇರ (ಶಿಕ್ಷಣ), ಶಿ.ನೆಗಳೂರ(ಆರೋಗ್ಯ), ಲಕ್ಷ್ಮೀಬಾಯಿ ಗಾಜಿ (ಜಾನಪದ ಕಲೆ), ಅಕ್ಕಮ್ಮ ಶಿರೂರ (ಸಾರಿಗೆ), ಎ.ಪಿ. ಆಶಾಲತಾ (ಕಾನೂನು), ಲಕ್ಷ್ಮೀ ಗುಡದೂರ (ಸಾವಯವ ಕೃಷಿ), ಲೀಲಾ ಶಿವಕುಮಾರ (ಅಪ್ನಾದೇಶ ಸೇವೆ) ಸುನಂದಾ ನಿಂಬನಗೌಡರ (ರಂಗಕಲೆ) ಅಪ್ನಾದೇಶ ಮಹಿಳಾ ಸಾಧಕಿಯರನ್ನಾಗಿ ಸನ್ಮಾನಿಸಲಾಯಿತು. ಎಸ್‌,ಬಿ.ಗಾಮನಗಟ್ಟಿ ಪ್ರಾಸ್ತಾವಿಕ ಮಾತನಾಡಿದರು.ಎಲ್‌.ಐ.ಲಕ್ಕಮ್ಮನವರ ಸ್ವಾಗತಿಸಿದರು.ಚಂದ್ರಶೇಖರ ತಿಗಡಿ ನಿರೂಪಿಸಿದರು. ಕೆ.ಎಂ.ಗೆದಗೇರಿ ವಂದಿಸಿದರು.

loading...